Home Blog Page 79

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆ ಲಿಯೊ ಅಧ್ಯಕ್ಷೆಯಾಗಿ ಭೂಮಿಕಾ‌ ಶೆಟ್ಟಿ – ಕಾರ್ಯದರ್ಶಿಯಾಗಿ ಚಿರಂತ್ ಜಿ.

0

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆ

ಲಿಯೊ ಅಧ್ಯಕ್ಷೆಯಾಗಿ ಭೂಮಿಕಾ‌ ಶೆಟ್ಟಿ – ಕಾರ್ಯದರ್ಶಿಯಾಗಿ ಚಿರಂತ್ ಜಿ.

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆಯು ನ. 27ರಂದು ಕ್ರಿಯೇಟಿವ್‌ಪಿಯು ಕಾಲೇಜಿನಲ್ಲಿ ಜರುಗಿತು. ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯು ಕಾಮರ್ಸ್‌ ವಿದ್ಯಾರ್ಥಿಗಳನ್ನೊಳಗೊಂಡ ಲಿಯೊ ತಂಡದ ಉದ್ಘಾಟನೆಯನ್ನು ಲಯನ್‌ ಜಿಲ್ಲೆ 317ಸಿ ಇದರ ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ಅವರು ನೆರವೇರಿಸಿ ಶುಭ ಹಾರೈಸಿದರು.

ಫಸ್ಟ್‌ ವಿಡಿಜಿ ಸಪ್ನಾ ಸುರೇಶ್‌ ನೂತನ ಲಿಯೊ ತಂಡದ ಚಾರ್ಟರ್‌ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರಮಾಣವಚನವನ್ನು ನೀಡಿದರು. ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್‌ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇಂದಿನ ಲಿಯೊ ಸದಸ್ಯರೆ, ಮುಂದಿನ ಲಯನ್‌ ಸದಸ್ಯರು ಎಂದು ನೂತನ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಲಿಯೊ ತಂಡದ ಅಧ್ಯಕ್ಷೆಯಾಗಿ ಭೂಮಿಕಾ ಶೆಟ್ಟಿ, ಕಾರ್ಯದರ್ಶಿಯಾಗಿ ಚಿರಂತ್ ಜಿ., ಕೋಶಾಧಿಕಾರಿಯಾಗಿ ಸಾನ್ವಿ ಆಚಾರ್ಯ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಓಂ ರಾಹುಲ್‌ ಜೊತೆಗೆ 25 ಮಂದಿ ಸದಸ್ಯರನ್ನೊಳಗೊಂಡ ನೂತನ ಚಾರ್ಟರ್‌ ತಂಡವು ರಚನೆಯಾಯಿತು.

ಜಿಲ್ಲೆಯ ಮಾಜಿ ಗವರ್ನರ್‌ ಎನ್‌. ಎಮ್‌. ಹೆಗ್ಡೆ ಅವರು ಸಾಂದರ್ಭಿಕವಾಗಿ ಮತಾತನಾಡಿ, ಲಯನ್ಸ್‌ ಮತ್ತು ಲಿಯೊ ಸದಸ್ಯರು ಯಾವ ರೀತಿಯಾಗಿ ಕ್ಲಬ್‌ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಅವರ ಜವಾಬ್ದಾರಿಗಳನ್ನು ನಿಭಾಯಿಸುವ ಕುರಿತು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಲಿಯೊ ಕೋ-ಆರ್ಡಿನೇಟರ್‌ ಮೊಹಮ್ಮದ್‌ ಮೌಲಾ, ಸಂಪುಟ ಕಾರ್ಯದರ್ಶಿ ಗಿರೀಶ್‌ ರಾವ್‌, ಕೋಶಾಧಿಕಾರಿ ಶ್ರೀನಿವಾಸ್‌ ಪೈ, ವಲಯಾಧ್ಯಕ್ಷ ಶಾಕೀರ್‌ ಹುಸೈನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಅಧ್ಯಕ್ಷೆ ಜ್ಯೋತಿ ರಮೇಶ್‌ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತ ಮತ್ತು ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿ, ಲಿಯೊ ಕೋ-ಆರ್ಡಿನೇಟರ್‌ ಜ್ಞಾನೇಶ್‌ ಕೋಟ್ಯಾನ್‌ ಧನ್ಯವಾದವಿತ್ತರು.

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಕಾರ್ಯದರ್ಶಿ ರಘುನಾಥ್ ಕೆ.ಎಸ್.‌, ಕೋಶಾಧಿಕಾರಿ ಟಿ. ಕೆ. ರಘುವೀರ್‌, ಬಿಓಡಿ ಸದಸ್ಯರಾದ ಪೂರ್ಣಿಮಾ ಶೆಣೈ, ನಿಹಾಲ್‌ ಶೆಟ್ಟಿ ಜಕ್ಕನ್‌ಮಕ್ಕಿ, ಶಾಲಿನಿ ಸುವರ್ಣ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರು ಸಹಕರಿಸಿದರು.ವಿದ್ಯಾರ್ಥಿನಿ ಹಿತ ನಿರೂಪಿಸಿದರು.

ಕಾರ್ಕಳ:ದುರ್ಗಾ ಫಾಲ್ಸ್‌ಗೆ ಈಜಲು ಹೋದ ವಿದ್ಯಾರ್ಥಿ ನೀರುಪಾಲು

0

ದುರ್ಗಾ ಫಾಲ್ಸ್‌ಗೆ ಈಜಲು ಹೋದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ನ.28ರಂದು ಮಧ್ಯಾಹ್ನ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಜಾಯಲ್ ಡಯಾಸ್ (19) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್‌ ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.

ಕಾರ್ಕಳ:ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿಧನ

0

ಕಾರ್ಕಳ:ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿಧನ

ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಕಾರ್ಕಳ ಸಹಿತ ವಿವಿಧ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಇಂದು ಮುಂಜಾನೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು.

ಮೃತರು, ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷರಾಗಿರುವ ಪತಿ ಲಾರೆನ್ಸ್ ಡೆಸಾ, ಪುತ್ರ, ಪುತ್ರಿ, ವಿದ್ಯಾರ್ಥಿ ಸಮುದಾಯ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಉದ್ಯಾವರ ಚರ್ಚಿನಲ್ಲಿ ನಡೆಯಲಿದೆ.

ಕಾರ್ಕಳ:ಗ್ರಾಮ ಪಂಚಾಯತ್ ಮರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ:ನವೀನ್ ನಾಯಕ್

0

ಕಾರ್ಕಳ ಗ್ರಾಮ ಪಂಚಾಯತ್ ಮರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ:ನವೀನ್ ನಾಯಕ್

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇರೆ ಬೇರೆ ಗ್ರಾಮ ಪಂಚಾಯತ್‌ಗಳಲ್ಲಿ 07 ಸ್ಥಾನಗಳಿಗೆ ನಡೆದ ಮರು ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಐದು ಬೆಂಬಲಿತ ಅಭ್ಯರ್ಥಿಗಳು ಜಯಭೇರಿಗಳಿಸಿದ್ದು, ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಹರ್ಷ ವ್ಯಕ್ತಪಡಿಸುತ್ತದೆ.

ಗ್ರಾಮ ಪಂಚಾಯತಿಗಳ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆ ಭಾಗದ ಮತದಾರರು ಭಾರತೀಯ ಜನತಾ ಪಾರ್ಟಿಯ ಮೇಲೆ ನಂಬಿಕೆ ಇಟ್ಟು ಮತದಾನ ಮಾಡಿ ಬೆಂಬಲಿಸಿದ್ದಾರೆ. ಜನರಿಗೆ ಬಿಜೆಪಿಯೇ ಭರವಸೆ ಎಂಬುವುದು ಖಾತ್ರಿಯಾಗಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನೀತಿ ಹಾಗೂ ಕಾರ್ಕಳದಲ್ಲಿ ಕಾಂಗ್ರೆಸ್‌ ನಾಯಕರ ದಬ್ಬಾಳಿಕೆಗೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಅವರ ನಿರಂತರ ಜನಸಂಪರ್ಕ, ಅವರು ಕ್ಷೇತ್ರದಲ್ಲಿ ಮಾಡಿರುವಂತಹ ನಿರಂತರ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರಣ. ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾನ ನೀಡಿ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಅಭ್ಯರ್ಥಿಗಳ ಗೆಲುವಿಗೆ ಹಗಲಿರಲು ದುಡಿದ ಕಾರ್ಯಕರ್ತರಿಗೆ, ಪಕ್ಷದ ಹಿರಿಯರಿಗೆ, ಬಿಜೆಪಿ ಕ್ಷೇತ್ರಾಧ್ಯಕ್ಷನಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾ ವಿಜಯೀಯಾದ ಅಭ್ಯರ್ಥಿಗಳಿಗೆ ಕಾರ್ಕಳ ಬಿಜೆಪಿ ಮಂಡಾಳ ಅಧ್ಯಕ್ಷ ನವೀನ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ..

ಗ್ರಾಮ ಪಂಚಾಯತ್ ಉಪ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆ- ಬಿಜೆಪಿಗೆ ಹಿನ್ನಡೆ ಕಳೆದ ಬಾರಿಕ್ಕಿಂತ ಹೆಚ್ವು ಸ್ಥಾನ ಗೆಲ್ಲಿಸಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ-ಶುಭದರಾವ್

0

ಗ್ರಾಮ ಪಂಚಾಯತ್ ಉಪ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆ- ಬಿಜೆಪಿಗೆ ಹಿನ್ನಡೆಯಾಗಿದೆ ಶುಭದರಾವ್

ಕಳೆದ ಬಾರಿಕ್ಕಿಂತ ಹೆಚ್ವು ಸ್ಥಾನ ಗೆಲ್ಲಿಸಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ

ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಕಳೆದ ಬಾರಿಕ್ಕಿಂತ ಹೆಚ್ಚು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ,
ಕಾರ್ಕಳ ವಿಧಾನ ಸಭಾ ಕ್ಷೇತದ ವಿವಿಧ ಗ್ರಾಮ ಪಂಚಾಯಿತಿಯ ಎಂಟು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಏಳು ಕಡೆಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರಲ್ಲಿ ಒಂದು ಅಭ್ಯರ್ಥಿಯು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಆರು ಸ್ಥಾನದ ಸ್ಪರ್ಧೆಯಲ್ಲಿ ಎರಡು ಸ್ಥಾನವನ್ನು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆದ್ದು ಕಳೆದ ಬಾರಿಕ್ಕಿಂತ ಹೆಚ್ಚು ಎರಡು ಸ್ಥಾನವನ್ನು ಪಡೆದಿದ್ದಾರೆ, ಈದು ಗ್ರಾಮದಲ್ಲಿ ನಮ್ಮ ಬಳಿಯಿದ್ದ ಒಂದು ಸ್ಥಾನವನ್ನು ನಾವು ಕಳೆದುಕೊಂಡರೂ ನಲ್ಲೂರು, ನೀರೆ ಮತ್ತು ಕಡ್ತಲದಲ್ಲಿ ಮೂರು ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಬಿಜೆಪಿ ಬೆಂಬಲಿತರು ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿ ಮೂರನ್ನು ಗೆದಿದ್ದು ಎರಡು ಸ್ಥಾನವನ್ನು ಬಿಜೆಪಿಯ ಬಂಡಾಯ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ, ಇದು ಕಾಂಗ್ರೆಸ್‌ ಸಾಧನೆಗೆ ಮತ್ತು ಬಿಜೆಪಿ ಹಿನ್ನಡೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದ್ದಾರೆ

ರಾಜ್ಯ ಸರಕಾರದ ಜನಪರ ಕಾರ್ಯಗಳು ಜನರಿಗೆ ತಲುಪಿ ಅವರ ಬದುಕಿಗೆ ಸಹಕಾರಿಯಾಗಿದೆ ಇದರಿಂದ ನಾವು ಮತದಾರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿ ಹೆಚ್ಚುವರಿ ಸ್ಥಾನವನ್ನು ಗೆಲ್ಲಲು ಸಹಕಾರಿಯಾಗಿದೆ. ಕಳೆದ ಚುನಾವಣೆಯಲ್ಲಿ ಎಂಟರಲ್ಲಿ ಒಂದು ಸ್ಥಾನದಲ್ಲಿ ಗೆದ್ದಿದ್ದ ನಾವು ಈ ಬಾರಿ ಮೂರು ಸ್ಥಾನ‌ ಗೆದ್ದು ಸಾಧಿಸಿದ್ದೇವೆ, ಕಳೆದ ಬಾರಿ ಏಳು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಮೂರು ಸ್ಥಾನಕ್ಕೆ ಕುಸಿದು ಹಿನ್ನಡೆ ಅನುಭವಿಸಿದೆ ಎಂದು ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಬ್ರಿ: ಎಸ್‌.ಆರ್. ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

0

ಹೆಬ್ರಿ: ಎಸ್‌.ಆರ್. ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ವಿದ್ಯಾರ್ಥಿಗಳು ವೇದಿಕೆಗಳನ್ನು ಬಳಸಿಕೊಳ್ಳಬೇಕು. ಸಾಹಿತ್ಯದ ಆಸಕ್ತಿ ನಿಮ್ಮಲ್ಲಿದ್ದಾಗ ಇಂತಹ ವೇದಿಕೆಗಳು ಅದರ ಬೆಳವಣಿಗೆಗೆ ಪುಷ್ಟಿಯನ್ನು ನೀಡುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಗಳು ಅಧಿಕವಿರುವುದರಿಂದ ಅವಕಾಶಗಳು ದೊರಕುವುದು ವಿರಳ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಬರುವ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು. ಇಂತಹ ಸಾಹಿತ್ಯದ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಎಸ್.ಆರ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಅವರು ಹೇಳಿದರು.

ಇವರು ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ, ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಹಾಗು ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಗುರುಪ್ರಸಾದ್, ಕನ್ನಡ ಉಪನ್ಯಾಸಕರು ಹಾಗು ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್.ಎನ್ ಅವರು ವಿದ್ಯಾರ್ಥಿಗಳು ವಾಚಿಸಿದ ಕವನಗಳಿಗೆ ಪ್ರತಿಕ್ರಿಯೆ ನೀಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆದ ಈ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ವರದಿಯನ್ನು ವಿದ್ಯಾರ್ಥಿನಿ ದೀಪಿಕಾ ವಾಚಿಸಿದರು.

ವಿದ್ಯಾರ್ಥಿ ಕವಿಗೋಷ್ಠಿ:
ಎಸ್.ಆರ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ನಿಶಾಂತ್, ಮಲ್ಲೇಶ್ ವೈ.ಸಿ, ಶಶಾಂಕ್, ಯಶಸ್ವಿನಿ ಸಿ.ಆರ್, ದಿಯಾ ಜಯಕರ ಪುತ್ರನ್, ಶರಣ್ಯ, ಅಮೂಲ್ಯ ಆರ್.ಶೆಟ್ಟಿ, ಅನುಷಾ ಎನ್.ಎಸ್, ದೀಪಿಕಾ, ಜೆ.ಟಿ.ಅನುಶ್ರೀ ರಾವ್, ಶ್ರದ್ಧಾ, ಕವನ ವಾಚಿಸಿದರು.
ವಿದ್ಯಾರ್ಥಿಗಳಾದ ತನುಶ್ರೀ ಸ್ವಾಗತಿಸಿ, ಶಬರೀಶ್ ವಂದಿಸಿ, ಪ್ರಿಯಾನಿ ಗೌಡ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ:ವೈಟ್ ಲಿಫ್ಟಿಂಗ್ ನಲ್ಲಿ ಎಸ್ ವಿ ಟಿ ಯ ಧನ್ಯಶ್ರೀ ಗೆ ಕಂಚಿನ ಪದಕ

0

ಕಾರ್ಕಳ:ವೈಟ್ ಲಿಫ್ಟಿಂಗ್ ನಲ್ಲಿ ಎಸ್ ವಿ ಟಿ ಯ ಧನ್ಯಶ್ರೀ ಗೆ ಕಂಚಿನ ಪದಕ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರು ಇಲ್ಲಿ ಆಯೋಜಿಸಿರುವ ಮಿನಿ ಒಲಂಪಿಕ್ ಕ್ರೀಡಾಕೂಟ 2024 ರಲ್ಲಿ ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿ ಕುಮಾರಿ ಧನ್ಯಶ್ರೀ 8ನೇ ತರಗತಿ ಇವರು ವೈಟ್ ಲಿಫ್ಟಿಂಗ್ ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದಿರುತ್ತಾರೆ.

ಇವರಿಗೆ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಭಾವತಿ ತರಬೇತಿಯನ್ನು ನೀಡಿರುತ್ತಾರೆ.ಇವರ ಈ ಶ್ರೇಷ್ಠ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ನೇಮಿರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ಮಸೀದಿ ಸಮೀಕ್ಷೆಗೆ ಬಂದಾಗ ಹಿಂಸೆ-ಗೋಲಿಬಾರ್: 3 ಸಾವು

0

ಮಸೀದಿ ಸಮೀಕ್ಷೆಗೆ ಬಂದಾಗ ಹಿಂಸೆ-ಗೋಲಿಬಾರ್: 3 ಸಾವು

ಉತ್ತರ ಪ್ರದೇಶದ ಸಂಭಲ್ ನಲ್ಲಿ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿ ಆರಂಭವಾದ ವಿವಾದವು ಹಿಂಸಾಚಾರಕ್ಕೆ ತಿರುಗಿ,ಮೂವರು ಸಾವಿಗೆ ಕಾರಣವಾಗಿದೆ.ಈ ಘಟನೆಯಲ್ಲಿ 20 ಪೊಲೀಸರು ಸಹಿತ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮೊಘಲರ ಕಾಲದಲ್ಲಿ ದೇಗುಲವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಜನರ ಗೊಂಪೊಂದು ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆಸಿದೆ. ಜತೆಗೆ ಪೊಲೀಸರತ್ತ ಕಲ್ಲು,ಚಪ್ಪಲಿ ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಉದ್ರಿಕ್ಕ ಗುಂಪಿನತ್ತ ಗುಂಡು ಹಾರಿಸಿದ್ದಾರೆ. ಹೀಗಾಗಿ 3 ಮಂದಿ ಅಸುನೀಗಿದ್ದಾರೆ.

ರವಿವಾರ ಬೆಳೆಗ್ಗೆ 7.30 ಕ್ಕೆ ಕೋರ್ಟ್ ನಿಂದ ನಿಯೋಜಿತವಾಗಿರುವ ಕೋರ್ಟ್ ಆಯುಕ್ತರ ತಂಡ ಸಮೀಕ್ಷೆ ನಡೆಸಲು ಆಗಮಿಸುತ್ತಿದ್ದಂತೆಯೇ ಪ್ರತಿಘಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿದರು.ಅದಕ್ಕೂ ಬಗ್ಗದೆ ಇದ್ದಾಗ ಪೊಲೀಸರು ಗುಂಡು ಹಾರಿಸಿದರು.ಹೀಗಾಗಿ ಮೂವರು ಮೃತಪಟ್ಟಿದಾರೆ.ಮುಂದಿನ 24 ಗಂಟೆಗಳ ಕಾಲ ಸಂಭಲ್ ತಾಲೂಕಿನಲ್ಲಿ ಮೊಬೈಲ್ ಇಂಟರನೆಟ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

15 ಮಂದಿ ವಶಕ್ಕೆ
ಗಲಾಟಿಗೆ ಸಂಬಂಧಿಸಿ ಮೂವರು ಮಹಿಳೆಯರು ಸಹಿತ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಮೊರದಾಬಾದ್ ಪೊಲೀಸ್ ಆಯುಕ್ತ ಅನಂಜ್ಯ ಕುಮಾರ್ ಸಿಂಗ್ ಹೇಳಿದ್ದಾರೆ.

ಕಾರ್ಕಳ:ಡಿ.ಆರ್.ರಾಜುರವರಿಗೆ ಶೃದ್ದಾಂಜಲಿ

0

ಸ್ವರ್ಗೀಯ ಡಿ.ಅರ್.ರಾಜು ಒಬ್ಬ ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ. ಅವರು ತಮ್ಮ ಬದುಕಿನಲ್ಲಿ ಪ್ರತಿಪಾದಿಸಿಕೊಂಡು ಬಂದ ಸಮಾಜಮುಖೀ ಕೆಲಸಗಳ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಬದ್ಧತೆಯಾಗಿದೆ. ಆಮೂಲಕ ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ ಎಂದು ಮಾಜಿ ಮುಖ್ಯ ಡಾ.ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.

ಅವರು ಬ್ಲಾಕ್ ಕಾರ್ಕಳ ಹಾಗೂ ಬ್ಲಾಕ್ ಕಾಂಗ್ರೆಸ್ ಹೆಬ್ರಿ ಜಂಟಿಯಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಿ ಆರ್ ರಾಜುರವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ದಿ.ರಾಜುರವರು ಕಾಂಗ್ರೆಸ್ ಪಕ್ಷದ ಒಬ್ಬ ಅತಿ ನಿಷ್ಠಾವಂತ ಕರ್ತವ್ಯನಿಷ್ಟ ಜನಪರ ಚಿಂತನೆಯ ಕಾರ್ಯಸಾಧಕ ನಾಯಕರಾಗಿದ್ದರು. ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ಶಾಂತಿ ಸೌಹಾರ್ಧತೆ ಅವರ ಬದುಕಿನ ಜೀವಾಳವಾಗಿತ್ತು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಉದಯ್ ಶೆಟ್ಟಿ ಮಾತನಾಡಿ ದಿ. ರಾಜುರವರು ಸಮಾಜದ ಸರ್ವಾಂಗೀಣ ಚಿಂತೆನೆ ಉಳ್ಳವರು ಸಮಾಜದ ಸರ್ವ ವ್ಯಕ್ತಿಗಳನ್ನು ಹೊಂದಿಕೊಂಡ ಜೀವನ ಸಾಧನೆ ಮಾಡಿದವರು ಕೊರೋನಾ ಕಷ್ಟ ಕಾಲದ ಸಂದರ್ಭದಲ್ಲಿ ಅವರು ಮಾಡಿದ ಜನಸೇವೆ ಅವಿಸ್ಮರಣೀಯ ಅವರ ಅಗಲಿಕೆ ನನಗೆ ಪಕ್ಷ ಸಂಘಟನೆಯ ವಿಚಾರವಾಗಿಯೂ ಅಪಾರ ನಷ್ಟ ಉಂಟು ಮಾಡಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುದ್ರಾಡಿ ಮಂಜುನಾಥ ಪೂಜಾರಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ನುಡಿ ನಮನ ಸಲ್ಲಿಸಿ ಮೃತರ ಗುಣಗಾನಗೈದರು.

ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಅದ್ಯಕ್ಷರುಗಳಾದ ಶುಭದ ರಾವ್ ಹಾಗೂ ಗೋಪಿನಾಥ್ ಭಟ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗಡೆ, ಶೃಂಗೇರಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ನಾಗರಾಜ್, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ವಿವಿದ ಘಟಕಗಳ ಅದ್ಯಕ್ಷರುಗಳು, ಗ್ರಾಮೀಣ ಸಮಿತಿಯ ಅದ್ಯಕ್ಷರುಗಳು ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

0

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

ಕಾರ್ಕಳ:ಬೈಲೂರು ಸರಕಾ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ, ನೀರೆ ಬೈಲೂರು ನಿವಾಸಿ ಶಾಂತಿನಾಥ ಜೋಗಿ (63 ) ಅವರು ನ. 23 ರಂದು
ನಿಧನ ಹೊಂದಿದರು.

ಮೃತರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಅವರು 35 ವರ್ಷದ ಶಿಕ್ಷಕ ವೃತ್ತಿಯಲ್ಲಿ ಸುಧೀರ್ಘ ಸೇವೆಯನ್ನು ಬೈಲೂರಿನ ಸರಕಾರಿ ಅಡವಿ ಪೂರ್ವ ಕಾಲೇಜಿನಲ್ಲಿ ಸಲ್ಲಿಸಿದ್ದರು.