Wednesday, April 29, 2026
Google search engine
Homeಹೆಬ್ರಿಶಿವಪುರ ಶ್ರೀಶಂಕರ ದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ : ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ...

ಶಿವಪುರ ಶ್ರೀಶಂಕರ ದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ : ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರ ಪ್ರತಿಷ್ಠೆ, ಧ್ವಜಸ್ತಂಭ ಪ್ರತಿಷ್ಠೆ,

ಶಿವಪುರ ಶ್ರೀಶಂಕರ ದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ : ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರ ಪ್ರತಿಷ್ಠೆ, ಧ್ವಜಸ್ತಂಭ ಪ್ರತಿಷ್ಠೆ,

ಶಿವಪುರ : ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಮೇ ೬ ರ ತನಕ ನಡೆಯುವ ಬ್ರಹ್ಮ ಕಲಶಾಭಿಷೇಕದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರ ಪ್ರತಿಷ್ಠೆ, ಧ್ವಜಸ್ತಂಭ ಪ್ರತಿಷ್ಠೆ, ಚಂಡಿಕಾ ಹೋಮ ಕ್ಷೇತ್ರದ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ನೇತ್ರತ್ವದಲ್ಲಿ ಬುಧವಾರ ನಡೆಯಿತು.

ಶ್ರೀ ನಾಗದೇವರ ಸನ್ನಿಧಿಯಲ್ಲಿ ವಾಸ್ತು ವಿಧಾನ, ನಾಗ ದೇವರ ಬಿಂಬಧಿವಾಸ, ಶ್ರೀ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಧಿವಾಸ ನಡೆಯಿತು. ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ಪ್ರಧಾನ ಕಾರ್ಯದರ್ಶಿ ಮೂರ್ಸಾಲು ಗೋಕುಲದಾಸ ನಾಯಕ್‌, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್‌, ಉದ್ಯಮಿ ಉದಯ ಕಡಂಬ ಶಿವಮೊಗ್ಗ, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಆರ್ಥಿಕ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಹುಣ್ಸೆಯಡಿ ಶಿವಪುರ, ಉಗ್ರಾಣ ಸಮಿತಿಯ ಸಂಚಾಲಕ ಬೈಕಾಡಿ ಮಂಜುನಾಥ ರಾವ್‌ ಎಲಿಕೋಡು, ಮಹಾಬಲೇಶ್ವರ ಅಡಿಗ ಶಿವಪುರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ ಕುಮಾರ್‌ ಶೆಟ್ಟಿ ನಾಯರಕೋಡು, ಸುನಂದಾ ಕುಲಾಲ್‌, ಪೂರ್ಣೇಶ ಸೇರಿಗಾರ್‌, ಸದಾನಂದ ಪೂಜಾರಿ, ವಿಶಾಲಾಕ್ಷಿ ವಿ ಶೆಟ್ಟಿ, ಸಂಜಯ ಆಚಾರ್ಯ, ಸಚಿನ್‌ ನಾಯ್ಕ್‌, ಜೀರ್ಣೋದ್ಧಾರ ಸಮಿತಿಯ ಪ್ರಸನ್ನ ಶೆಟ್ಟಿ, ರಮೇಶ ಕುಮಾರ್‌, ರಾಘವೇಂದ್ರ ಪೂಜಾರಿ, ಜಗನ್ನಾಥ ಹಾಂಡ, ಪುಪ್ಪಾ ನಾಯ್ಕ್‌, ಪೂರ್ಣೀಮಾ ಹಾಂಡ, ವಿವಿಧ ಪ್ರಮುಖರಾದ
ಚಂದ್ರಶೇಖರ ಶೆಟ್ಟಿ ಬಿಲ್ಲುಬೈಲು, ಜಗನ್ನಾಥ ಕುಲಾಲ್‌ ಶಿವಪುರ, ಶಿವಪ್ರಸಾದ್‌ ಅಡಿಗ, ರಾಧಿಕಾ ಅಡಿಗ, ಜಯಶೀಲ ಹೆಗ್ಡೆ, ರಂಜಿತಾ ಪ್ರಭು, ರಾಮ ಬೆಳಿರಾಯ, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ವಿವಿಧ ಉಪಸಮಿತಿಯ ಪ್ರಮುಖರು, ಸದಸ್ಯರು,ಗಣ್ಯರು, ಅರ್ಚಕ ವೃಂದ ಸೇರಿದಂತೆ ಭಕ್ತಸಮೂಹ ಭಾಗಿಯಾದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೇಟಿ.

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಮಧ್ಯಾಹ್ನ ಬೇಟಿ ನೀಡಿದರು. ಕ್ಷೇತ್ರದ ವತಿಯಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌ ಮತ್ತು ಪ್ರಮುಖರು ದೇವರ ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮತ್ತು ಕಾಷ್ಠ ಮತ್ತು ಶಿಲಾ ಕೆಲಸದ ಬಗ್ಗೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಇಂದು ಗುರುವಾರ ನಾಗಶಿಲಾ ಪ್ರತಿಷ್ಠೆ, ಆಶ್ಲೇಷಾ ಬಲಿ, ಶ್ರೀ ಗಣಪತಿ ದೇವರಿಗೆ, ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಶಾಂತಿ, ಪ್ರಾಯಶ್ಚಿತ್ತ ಹೋಮ, ಶ್ರೀ ಶಂಕರಲಿಂಗೇಶ್ವರ ದೇವರಿಗೆ ತತ್ವ ಕಲಶಾಭಿಷೇಕ ಹಾಗೂ ಸಂಜೆ ಬ್ರಹ್ಮಕಲಶಾಧಿವಾಸ ನಡೆಯಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments