ಕುಚ್ಚೂರು ಶಾಂತಿನಿಕೇತನದ ರಾಜೇಶ್ ಅವರಿಗೆ ಪಿಎಚ್ ಡಿ ಪದವಿ.
ಹೆಬ್ರಿ :ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ ಮತ್ತು ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ತುಮಕೂರು ವಿವಿಯ ಉಪನ್ಯಾಸಕರಾದ ರಾಜೇಶ್ ಕುಡಿಬೈಲು ಅವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಶ್ರೀನಿವಾಸ್ ಮೂರ್ತಿ ಎಂ.ಡಿ. ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ (Ph.D.) ಪದವಿಯನ್ನು ಪಡೆದಿದ್ದಾರೆ.
” Financial Performance of Co-operatives: A Comparative Study of KSCF Societies and KSSFC Societies in Udupi District”ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.




























