ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಹೆಬ್ರಿ ಶಾಖೆಯನ್ನು ಉದ್ಘಾಟಿಸಿದರು.
ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಕುಡುಬಿ ಸಮಾಜವು ಯಾವುದೇ ಪ್ರಚಾರವನ್ನು ಬಯಸದೆ, ಸಮಾಜದ ಉದ್ಧಾರಕ್ಕೋಸ್ಕರ ಆರ್ಥಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿ ಶ್ರಮಿಸುತ್ತಿರುವುದು ಶ್ಲಾಘನೀಯ. ವಿವಿಧೋದ್ದೇಶ ಸಹಕಾರ ಸಂಘ ಆಗಿದ್ದರಿಂದ ಅನೇಕ ರೀತಿಯ ಸೇವೆಗಳನ್ನು ನೀಡಬಹುದಾಗಿದೆ. ನಮ್ಮ ಸಹಕಾರ ನಿರಂತರವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅವರು ಹೆಬ್ರಿಯಲ್ಲಿ ಇತ್ತೀಚೆಗೆ ಗೋಳಿಯಂಗಡಿ ಶ್ರೀ ದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಹೆಬ್ರಿ ಶಾಖೆಯನ್ನು ಉದ್ಘಾಟಿಸಿ, ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಕುಡುಬಿ ಸಮಾಜದವರು ಅತ್ಯಂತ ಹಿಂದುಳಿದಿದ್ದಾರೆ. ಅವರನ್ನು ಅಲೆಮಾರಿ ಜನಾಂಗಕ್ಕೆ ಸೇರಿಸುವ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಮುಂದೆ ಅವರಿಗೂ ಎಲ್ಲ ರೀತಿಯ ಸರ್ಕಾರದ ಸೌಲಭ್ಯಗಳು ದೊರಕುತ್ತದೆ. ಸಮಾಜ ಬಾಂಧವರು ಸಂಘಟಿತರಾಗಬೇಕೆಂದು ಹೇಳಿದರು.
ಗೋಳಿಯಂಗಡಿ ಶ್ರೀ ದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬೆಳ್ವೆ ತೆಂಕಬೆಟ್ಟು ಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಸಹಕಾರ ನೀಡಿದಾಗ ಸಹಕಾರಿ ಸಂಘ ಉತ್ತಮವಾಗಿ ಬೆಳೆಯುತ್ತದೆ. ಶಿಕ್ಷಣ ಹಾಗೂ ಆರ್ಥಿಕ ಚಟುವಟಿಕೆ ಮೂಲಕ ಸಂಘಟಿತರಾಗೋಣ ಎಂದರು.
ಹೆಬ್ರಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ದಿನೇಶ ಡಿ.ಈ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ ಕುಮಾರ್, ಉಡುಪಿ ಜಿಲ್ಲಾ ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ ಕಲ್ಬರ್ಗಿ, ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸಂಘ ಗೋಳಿಯಂಗಡಿ ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ ಅಲ್ಬಾಡಿ, ಕಟ್ಟಡ ಮಾಲೀಕ ರಾಮ ನಾಯ್ಕ ಕೆ., ಸಿಇಒ ಲಲಿತ ಮರೂರು, ನಿರ್ದೇಶಕರಾದ ಕೃಷ್ಣ ನಾಯ್ಕ ಸೂರ್ಗೋಳಿ, ಪ್ರಭಾಕರ ನಾಯ್ಕ ತೊನ್ನಾಸೆ ಹಾಡಿಮನೆ, ಕಾಳು ನಾಯ್ಕ ಎಲ್ಸಿಮನೆ ಹೆಂಗವಳ್ಳಿ, ಲಕ್ಷ್ಮಣ ನಾಯ್ಕ ಆರ್ಡಿ, ಸೂರ್ಯಕಾಂತಿ ಹೆಂಗವಳ್ಳಿ, ಜಾನಕಿ ಬೆಳನಬೆಟ್ಟು ಕಲ್ಲಾಟೆ, ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಗಣೇಶ್ ಶೇಡಿಮನೆ ನಿರೂಪಿಸಿದರು. ಸಿಇಒ ಲಲಿತ ಮರೂರು ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಕೃಷ್ಣ ನಾಯ್ಕ ಕಾರಿಕೊಡ್ಲು ವಂದಿಸಿದರು. ಲಕ್ಷ್ಮಣ್ ನಾಯ್ಕ ಆರ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.




























