ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾ ಸಂಸ್ಥಾನದ ಶಾಖಾ ಕ್ಷೇತ್ರ ಅತಿಶಯ ಶ್ರೀ ಕ್ಷೇತ್ರ ವರಂಗದಲ್ಲಿ ಮೇ 10 ಮತ್ತು 11 ರಂದು ಜಗದ್ಗುರು ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಗಳವರ ನೇತ್ರತ್ವದಲ್ಲಿ ನೂತನ ಶಿಲಾಮಯ ಗುಡಿಯಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಾಯ ಹಾಗೂ ಪಟ್ಟದ ಪಂಜುರ್ಲಿ ದೈವಗಳ ಪ್ರತಿಷ್ಠೆ ಪ್ರಯುಕ್ತ ವಿವಿಧ ವಿಧಿವಿಧಾನಗಳು ನಡೆಯಲಿದೆ.
ಭಾನುವಾರ ತೋರಣ ಮೂಹೂರ್ತದ ವಿಧಿವಿಧಾನಗಳು ನಡೆದು ಸೋಮವಾರ ಬೆಳಿಗ್ಗೆ ದೈವಗಳ ಪ್ರತಿಷ್ಠೆ ಹಾಗೂ ಸಂಜೆ ದೈವಗಳ ವೈಭವದ ನೇಮೋತ್ಸವ ನಡೆಯಲಿದೆ ಎಂದು ವರಂಗ ಶ್ರೀ ಜೈನ ಮಠದ ಪ್ರಕಟಣೆ ತಿಳಿಸಿದೆ.






























