ಗೋಪೂಜೆಯನ್ನು ಸಾವರ್ಕರ್ ವಿರೋಧಿಸಿದ್ದರು ಮತ್ತು ಅದನ್ನು ಉಪಯುಕ್ತ ಪ್ರಾಣಿಯಾಗಿ ಮಾತ್ರ ಪರಿಗಣಿಸಿದ್ದರು ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ವಿನಾಯಕ ದಾಮೋದರ ಸಾವರ್ಕರ್ ಅವರು ಹಸುವನ್ನು ಯಾವಾಗಲೂ ಉಪಯುಕ್ತ ಪ್ರಾಣಿ ಎಂದು ಪರಿಗಣಿಸುತ್ತಿದ್ದರು. ಅವರು ತಮ್ಮ ಒಂದು ಪುಸ್ತಕದಲ್ಲಿ ಹಸು ಕೇವಲ ಒಂದು ಪ್ರಾಣಿಯಷ್ಟೇ. ಅದನ್ನು ದೇವರು ಅಥವಾ ದೇವತೆ ಎಂದು ಪರಿಗಣಿಸುವುದು ಮಾನವೀಯತೆಗೆ ಮಾತ್ರವಲ್ಲ, ದೈವತ್ವದ ಪರಿಕಲ್ಪನೆಗೂ ಅವಮಾನ ಮಾಡಿದಂತಾಗುತ್ತದೆ” ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.


















