Tuesday, August 25, 2026
Google search engine
Homeಹೆಬ್ರಿಹೆಬ್ರಿ: ಎಸ್. ಆರ್. ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಭಾಂಗಣದಲ್ಲಿ “ ಟ್ಯಾಲೆಂಟ್ ಫೆಸ್ಟ್” ಕಾರ್ಯಕ್ರಮ

ಹೆಬ್ರಿ: ಎಸ್. ಆರ್. ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಭಾಂಗಣದಲ್ಲಿ “ ಟ್ಯಾಲೆಂಟ್ ಫೆಸ್ಟ್” ಕಾರ್ಯಕ್ರಮ

ಹೆಬ್ರಿ: ಎಸ್. ಆರ್. ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಬ್ರಿಯಲ್ಲಿ ಆ. 5 ರಂದು ಶಾಲೆಯ ಎಸ್. ಆರ್. ಸಭಾಂಗಣದಲ್ಲಿ “ ಟ್ಯಾಲೆಂಟ್ ಫೆಸ್ಟ್” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು: ಎಚ್.ನಾಗರಾಜ್ ಶೆಟ್ಟಿ
ವಿದ್ಯಾರ್ಥಿಗಳು ಪಠ್ಯಪುಸ್ತಕದ ಪಾಠಗಳನ್ನು ಅರ್ಥಮಾಡಿಕೊಂಡು ಓದುವುದರ ಜೊತೆಗೆ, ನಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ , ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ಎಂದು ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಚ್. ನಾಗರಾಜ್ ಶೆಟ್ಟಿ ಅವರು ಹೇಳಿದರು.

ಇವರು ಎಸ್ ಆರ್ ಆಂಗ್ಲ ಮಾಧ್ಯಮ ಶಾಲೆಯ (ರಾಜ್ಯ ಪಠ್ಯಕ್ರಮ) ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಟ್ಯಾಲೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ನಿಮ್ಮದೇ ಆದ ವಿಶಿಷ್ಟ ಪ್ರತಿಭೆಗಳು ಅಡಗಿದೆ. ಸೂಕ್ತ ವೇದಿಕೆಗಳು ದೊರೆತಾಗ ಮಾತ್ರ ಅದು ತಿಳಿಯುತ್ತದೆ. ಪ್ರತಿಯೊಬ್ಬರು ಭಾಗವಹಿಸಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಸುಚಿತ್ರ, ವಿನಯಾ ಅವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವು ನಡೆಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಭವ್ ನಿರೂಪಿಸಿ, ಮನೀಶ್ ಬಾಬು ಸ್ವಾಗತಿಸಿ, ಶಮಿತಾ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments