Tuesday, August 25, 2026
Google search engine
Homeಕಾರ್ಕಳನಿಟ್ಟೆ: ಹರ್ ಘರ್ ತಿರಂಗಾ ಅಂಗವಾಗಿ ಸೈಕಲ್ ರ‍್ಯಾಲಿ

ನಿಟ್ಟೆ: ಹರ್ ಘರ್ ತಿರಂಗಾ ಅಂಗವಾಗಿ ಸೈಕಲ್ ರ‍್ಯಾಲಿ

ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು 6 ಕೆ.ಎ.ಆರ್ ನೌಕಾ ಉಪಘಟಕ, ಎನ್ಸಿಸಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವದ ಕೆಡೆಟ್ ಗಳು ಆಗಸ್ಟ್ 16 ರಂದು ಹರ್ ಘರ್ ತಿರಂಗಾದ ಸಂದರ್ಭದಲ್ಲಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಸಬ್ ಲೆಫ್ಟಿನೆಂಟ್ ಡಾ. ಶಿವಪ್ರಸಾದ್ ಶೆಟ್ಟಿ, ಎಎನ್ ಒ ಹಾಗೂ ಎನ್ ಸಿಸಿ ಉಪ ಘಟಕದ ಕೆಡೆಟ್ ಗಳು ಭಾಗವಹಿಸಿದ್ದರು. ಕಾರ್ಕಳದಲ್ಲಿ ನಡೆದ ರ‍್ಯಾಲಿಯು ಎನ್ಸಿಸಿ ಕೆಡೆಟ್ಗಳು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಿಡಿದು ಆನೆಕೆರೆಯ ಯುದ್ಧ ಸ್ಮಾರಕದಲ್ಲಿ ಮುಕ್ತಾಯಗೊಂಡಿತು. ಈ ರ‍್ಯಾಲಿಯು ಹರ್ ಘರ್ ತಿರಂಗಾದ ಸ್ಫೂರ್ತಿಯ ಬಗ್ಗೆ ಜಾಗೃತಿ ಮೂಡಿಸಿತು ಮತ್ತು ರಾಷ್ಟ್ರದ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಲು ನಾಗರಿಕರನ್ನು ಪ್ರೋತ್ಸಾಹಿಸಿತು.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments