Monday, August 24, 2026
Google search engine
Homeಕಾರ್ಕಳಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾದ ಗೌತಮ್ ಅದಾನಿ: ಕರ್ನಾಟಕದ ಕಾಂಗ್ರೆಸ್ ಸರಕಾರ ಅದಾನಿಯದ್ದೇ?...

ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾದ ಗೌತಮ್ ಅದಾನಿ: ಕರ್ನಾಟಕದ ಕಾಂಗ್ರೆಸ್ ಸರಕಾರ ಅದಾನಿಯದ್ದೇ? ರಾಹುಲ್ ಗಾಂಧಿಗೆ ವಿ. ಸುನಿಲ್ ಕುಮಾರ್ ಪ್ರಶ್ನೆ

ಕೇಂದ್ರ ಸರಕಾರವನ್ನು ಅದಾನಿ, ಅಂಬಾನಿ ಸರಕಾರ ಎಂದು ಟೀಕಿಸುತ್ತಿದ್ದ ಲೋಕಸಭೆಯ ವಿಪಕ್ಷನಾಯಕ ರಾಹುಲ್ ಗಾಂಧಿಯವರೇ, ಕರ್ನಾಟಕದಲ್ಲಿ ಇರುವುದು ಯಾರ ಸರಕಾರ ಎಂದು ಉತ್ತರಿಸಿ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ಗೌತಮ್ ಅದಾನಿಯನ್ನು ತನ್ನ ಆಜನ್ಮಶತ್ರು ಎಂದು ವಿದೇಶದ ನೆಲದಲ್ಲಿ ನಿಂತು ರಾಹುಲ್ ಗಾಂಧಿ ಅಬ್ಬರಿಸಿದ್ದರು. ಆದರೆ ಇದೇ ಅದಾನಿ ಈಗ ಬೆಂಗಳೂರಿನಗೆ ಬಂದು ಕಾಂಗ್ರೆಸ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಹಾಗಾದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಅದಾನಿಯದ್ದೇ? ನಿಮ್ಮ ಮಾತಿಗೂ, ಕೃತಿಗೂ, ಸಿದ್ಧಾಂತಕ್ಕೂ ವಾಸ್ತವಕ್ಕೂ ಎಷ್ಟು ವೈರುಧ್ಯ ಎಂಬುದು -ಇದರಿಂದಲೇ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments