ಅಮೆರಿಕದಮಕ್ಕಳು ಹದಿಹರೆಯದವರಿಗೆ ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಬಳಕೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲು ಮೆಟಾ ಕಂಪೆನಿ ಒಪ್ಪಿಗೆ ಸೂಚಿಸಿದೆ. ವಿವಿಧ ರಾಜ್ಯಗಳೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕ್ಯಾಲಿ ಫೋರ್ನಿಯಾದ ಉತ್ತರ ಜಿಲ್ಲಾ ನ್ಯಾಯಾ ಲಯದಲ್ಲಿ ಬುಧವಾರ ಈ ಒಪ್ಪಂದವನ್ನು ದಾಖಲಿಸಲಾಗಿದ್ದು, ಇದರಡಿ ಡೀಫಾಲ್ಟ್ ದೈನಂದಿನ ಸಮಯದ ಮಿತಿಗಳು, ರಾತ್ರಿ ವೇಳೆಯ ಬಳಕೆಗೆ ನಿರ್ಬಂಧಗಳು, ಬಲವಾದ ಪೋಷಕರ ನಿಯಂತ್ರಣಗಳು ಹಾಗೂ ಬಳಕೆ ದಾರರ ವಯಸ್ಸನ್ನು ಖಚಿತ ಪಡಿಸಿಕೊಳ್ಳಲು ಹೊಸ ಕ್ರಮಗಳನ್ನು ಪರಿಚಯಿಸ ಲಾಗುತ್ತದೆ. ಆದರೂ ಈ ಒಪ್ಪಂದ ಅಂತಿಮವಾಗಿ ನ್ಯಾಯಾಲಯದ ಅನುಮೋದನೆಗೆ ಒಳ ಪಡಬೇಕಿದೆ.
ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.



















