ಪ್ರಧಾನಿ ನರೇಂದ್ರ ಮೋದಿ ಅವರು ಆ.29ರಿಂದ ನಾಲ್ಕು ದಿನಗಳ ಕಾಲ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ಥಾನ್ ಪ್ರವಾಸ 5.29 ಕೈಗೊಳ್ಳಲಿದ್ದಾರೆ. ಮತ್ತು 30ರಂದು ಉಜ್ಬೇಕಿಸ್ತಾನ್ ಹಾಗೂ ಆ.31 ಮತ್ತು ಸೆ.1ರಂದು ಕಿರ್ಗಿಸ್ಥಾನಕ್ಕೆ ‘ಭೇಟಿ ನೀಡಲಿದ್ದಾರೆ.
ಕಿರ್ಗಿಸ್ಥಾನದಲ್ಲಿ ನಡೆಯಲಿರುವ ಶಾಂಘಾಯ್ ಸಹಕಾರ ಸಂಘ (ಎಸ್‌ಸಿಒ) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ರಷ್ಯಾ ಅಧ್ಯಕ್ಷ ಪುತಿನ್ ಅವರ ಜತೆಗೂ ದ್ವಿಪ ಕ್ಷೀಯ ಮಾತುಕತೆ ನಡೆಸಲಿದ್ದಾರೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಶೇಷವಾಗಿ ವ್ಯಾಪಾರ ಹಾಗೂ ಆರ್ಥಿಕ ಸಂಬಂಧ, ಪ್ರಾದೇಶಿಕ ಮತ್ತು ಜಾಗ ತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.



















