3 ದಿನದ ವಿದೇಶ ಪ್ರವಾಸ ಭೇಟಿ ಅಂಗವಾಗಿ ಈಗಾಗಲೇ ನ್ಯೂಯಾರ್ಕ್‌ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ವೀಸಾ ರದ್ದು ಮಾಡ ಬೇಕೆಂದು ಅಮೆರಿಕ ಕಾಂಗ್ರೆಸ್ ರಚಿಸಿ ರುವ ಧಾರ್ಮಿಕ ಸ್ವಾತಂತ್ರ್ಯ ಸಲಹಾ ಸಮಿತಿ ಒತ್ತಾಯಿಸಿದೆ.
ಇದೇ ವೇಳೆ ಆ.29ರಂದು ನಿಗದಿಯಾಗಿರುವ ಭಾಗವತ್ ಭಾಷಣದ ಬಗ್ಗೆಯೂ ಈ ಸಮಿತಿ ಕಳವಳವನ್ನು ವ್ಯಕ್ತಪಡಿಸಿದೆ. ಧಾರ್ಮಿಕ ಅಲ್ಪಸಂಖ್ಯಾಕರ ವಿರುದ್ದ ಹಿಂಸಾತ್ಮಕ ದಾಳಿಗಳನ್ನು ಆರ್‌ಎಸ್‌ಎಸ್ ನಡೆಸಿದೆ ಎಂದು ಆರೋಪಿಸಿದೆ.



















