ಆ.29:ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಉದ್ಘಾಟನೆ
ಅಧ್ಯಕ್ಷರಾಗಿ ಸಂತೋಷ್ ಡಿಸಿಲ್ವ ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ರಾವ್
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಗಸ್ಟ್ 29 ರಂದು ಕಾರ್ಕಳದಲ್ಲಿ ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಪ್ರಾರಂಭಗೊಳ್ಳಲಿದೆ. ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ಹಾಗು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ಲಬ್ ಪ್ರಾರಂಭಗೊಂಡಿದ್ದು, ಮ್ಯಾರಥಾನ್ ಆಯೋಜನೆಯ ಗುರಿಯನ್ನು ಇಟ್ಟುಕೊಂಡಿದೆ.ಉದ್ಘಾಟನೆಯು ಆ.29ರ ಬೆಳ್ಳಿಗೆ 10.30 ಕ್ಕೆ ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಕ್ರೈಸ್ಟ್ ಕಿಂಗ್ ಕ್ಯಾಂಪಸ್ ಕಾರ್ಕಳ ಸಂಸ್ಥೆಯಲ್ಲಿ ನಡೆಯಲಿದೆ.
ಪದಾಧಿಕಾರಿಗಳು:
ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಇದರ ಮುಂದಿನ 3 ವರ್ಷಗಳಿಗೆ ಅಧ್ಯಕ್ಷರಾಗಿ ಸಂತೋಷ್ ಡಿಸಿಲ್ವ, ಗೌರವಾಧ್ಯಕ್ಷರಾಗಿ ರೋಹಿತ್ ಕುಮಾರ್ ಕಟೀಲ್,ಕರುಣಾಕರ ಶೆಟ್ಟಿ,ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ರಾವ್, ಕೋಶಾಧಿಕಾರಿಯಾಗಿ ಆಶಿಶ್ ಶೆಟ್ಟಿ ಉಪಾಧ್ಯಕ್ಷರಾಗಿ ಗುರುಪ್ರಸಾದ್ ಶೆಟ್ಟಿ ಜಾರ್ಕಳ,ಗಣೇಶ್ ಪೂಜಾರಿ ನಿಟ್ಟೆ,ಸಚಿದಾನಂದ ಶೆಟ್ಟಿ,ವಿದ್ಯಾ ಪೈ,ಪ್ರಕಾಶ್ ಪಿಂಟೋ ಕುಂಟಲ್ಪಾಡಿ,ಉಷಾ ಶೆಟ್ಟಿ ನಿಟ್ಟೆ,ಅಭಿಷೇಕ್ ಎಸ್ ಮಡಿವಾಳ ಕಾರ್ಯದರ್ಶಿಯಾಗಿ ಅಭಿಶೇಕ್ ಸುವರ್ಣ,ನಿತ್ಯಾನಂದ ಭಂಡಾರಿ ನಿರ್ದೇಶಕರಾಗಿ ಪ್ರಭಾ ಹೆಗ್ಡೆ,ಪ್ರವೀಣ್ ಸಾಣೂರು, ಸಂತೋಷ್ ಪೂಜಾರಿ, ಮಧುರಾಜ್ ಶೆಟ್ಟಿ, ಸಂತೋಷ್ ಡಿಸೋಜಾ ಜೋಡುರಸ್ತೆ,ಎಡ್ವರ್ಡ್ ಡಿಸೋಜಾ ಜೋಡುರಸ್ತೆರವರು ಆಯ್ಕೆಯಾಗಿದ್ದಾರೆ.





















