ಬಹುಕಾಲದ ಕನಸಾಗಿದ್ದ ಕೈಲಾಸ-ಮಾನಸಸರೋವರ ಯಾತ್ರೆ ಈಡೇರಿದ ಖುಷಿಯಲ್ಲಿದ್ದ ತಂಜಾವೂರಿನ ಇಳ ವರಸಿ ಎಂಬ ಮಹಿಳೆಯೊಬ್ಬರು ನೇಪಾಲ ಪ್ರವಾಹದ ಬಳಿಕ ನಾಪತ್ತೆಯಾಗಿದ್ದಾರೆ.
ಯಾತ್ರೆ ಆರಂಭಿಸುವ ಮುನ್ನ ಮಗನಿಗೆ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ
ತಿಳಿಸಿದ್ದರು. ಆದರೆ, ಅವರು ಪ್ರಯಾಣಿಸುತ್ತಿದ್ದ ಬಸ್ ನಾಪತ್ತೆಯಾಗಿರುವ ಮಾಹಿತಿ ಕುಟುಂಬದ ಆತಂಕ ಹೆಚ್ಚಿಸಿದೆ. ಪಿಂಚಣಿ ಹಣ ಉಳಿಸಿ ಯಾತ್ರೆ ಕೈಗೊಂಡಿದ್ದ
ತಾಯಿಗಾಗಿ ಮಗ ಮುರಳಿ, ಸುರಕ್ಷಿತವಾಗಿ ಮರ ಳುವಂತೆ ಪ್ರಾರ್ಥಿಸುತ್ತಿದ್ದಾರೆ.



















