Tuesday, October 6, 2026
Google search engine
Homeಹೆಬ್ರಿಆಂಧ್ರ ಪ್ರದೇಶದ ವಿಜಯವಾಡದಲ್ಲಿ ವಿಜೃಂಭಿಸಿದ ಹೆಬ್ರಿಯ ಪ್ರತಿಭೆಗಳು - ಕ್ಷೇತ್ರ ಮಟ್ಟದಲ್ಲಿ ಪ್ರಥಮ, ರಾಷ್ಟ್ರ ಮಟ್ಟಕ್ಕೆ...

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ವಿಜೃಂಭಿಸಿದ ಹೆಬ್ರಿಯ ಪ್ರತಿಭೆಗಳು – ಕ್ಷೇತ್ರ ಮಟ್ಟದಲ್ಲಿ ಪ್ರಥಮ, ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಹೆಬ್ರಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ 2026-27ನೇ ಸಾಲಿನ ಕ್ಷೇತ್ರ ಮಟ್ಟದ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಕೇಂದ್ರ (ಸಿಬಿಎಸ್ಇ), ಹೆಬ್ರಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಡದಲ್ಲಿ ಇತ್ತೀಚೆಗೆ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಮೃತ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕೂ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ ಶಾಲೆಗೆ, ಜಿಲ್ಲೆಗೆ ಮತ್ತು ನಮ್ಮ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವಿಜೇತ ವಿದ್ಯಾರ್ಥಿಗಳು:
ಕು. ಅಚಿಂತ್ಯ ಆರ್. ಭಟ್ – ಕಥಾ ಕಥನ – ಪ್ರಥಮ • ಕು. ವರ್ಷಿತಾ ಎಸ್ – ಗಣಿತ ಮಾದರಿ (Identities) – ಪ್ರಥಮ • ಕು. ವಿವಿಧಾ ಹೆಗ್ಡೆ – ಗಣಿತ ಮಾದರಿ (Identities) – ಪ್ರಥಮ • ಮಾ. ಪ್ರಥಮ್ ಎ. ಕುಲಾಲ್ – ನವೀನ ವಿಜ್ಞಾನ ಮಾದರಿ – ಪ್ರಥಮ.

ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಹಾರ್ದಿಕ ಅಭಿನಂದನೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ .

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments