ಕಳೆದ 25 ವರ್ಷಗಳಿಂದ ಮಹಾನಗರದಲ್ಲಿ ಯಕ್ಷ ಶಿಕ್ಷಣ, ಬಯಲಾಟ, ಸರಣಿ ತಾಳಮದ್ದಳೆ, ಗ್ರಂಥ ಪ್ರಕಟನೆ, ಕಲಾವಿದರಿಗೆ ಸಮಾನ, ಪ್ರಶಸ್ತಿ ಪ್ರದಾನ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಮನಗೆದ್ದಿರುವ ಯಕ್ಷಗುರು ಆಜೆಕಾರು ಬಾಲಕೃಷ್ಣ ಶೆಟ್ಟಿ ಅವರ `ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತ ಪರ್ವ ಸಂಭ್ರಮದ ಅಂಗವಾಗಿ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ವು ಆ. 3, 4 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದಿದೆ.
ಕಲ್ಲಾಡಿ ವಿಟ್ಟಲ ಶೆಟ್ಟಿ ಪ್ರಾಂಗಣದಲ್ಲಿ ಛಂದೋಬ್ರಹ್ಮಡಾ।ಎನ್.ನಾರಾಯಣ ಶೆಟ್ಟಿ ಶಿಮಂತೂರು ಸಭಾಂಗಣ, ಡಾ| ಆರ್. ಕೆ. ಶೆಟ್ಟಿಯಕ್ಷಕಲಾ ವೇದಿಕೆಯಲ್ಲಿ ಸಮ್ಮೇಳನವು ಉದ್ಘಾಟನೆಗೊಂಡಿತು. ಸಮ್ಮೇಳನಾಧ್ಯಕ್ಷತೆಯನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷಡಾ। ಟಿ. ಶ್ಯಾಮ ಭಟ್ ಮತ್ತು ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿಯವರು ವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಉದ್ಘಾಟಿಸಿದರು.
ಆನುವಂಶಿಕ ಆರ್ಚಕ ವೇ। ಮೂ ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿದರು. ಯಕ್ಷಗಾನ ಮುಂಬೆಳಗು ಸಮ್ಮೇಳನ ಸಂಪುಟವನ್ನು ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಸಿಎಂಡಿ ಡಾ| ಕನ್ಯಾನ ಸದಾಶಿವ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಎಲ್.ಡಿ.ಎಸ್. ಇನ್ಫೋಟೆಕ್ ಸಂಸ್ಥೆಯ ಆಮರನಾಥ ಶೆಟ್ಟಿ ಭಾಗವಹಿಸಿದ್ದು, ಶ್ರೀ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ವಿದ್ಯಾ ವಿಹಾರ್ ಇದರ ಪ್ರಧಾನ ಆರ್ಚಕ ವೇ| ಮೂ| ಪೆರ್ಣಂಕಿಲ ಶ್ರೀ ಹರಿದಾಸ ಭಟ್ ಶುಭಸಂಶನೆಗೈದರು.
ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಆಡ್ವಕೇಟ್ ಡಿ.ಕೆ. ಶೆಟ್ಟಿ ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಮಾಜಿ ಅಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರುಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಯಕ್ಷಕಲಾರಂಗ ಕಾರ್ಕಳ ಅಧ್ಯಕ್ಷ ವಿಜಯ ಶೆಟ್ಟಿ ಕಾರ್ಕಳ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ, ಕನ್ನಡ ಭವನ ಎಜುಕೇಶನ್ ಸೊಸೈಟಿಯ ಅಧ್ಯಕ್ಷಗಿರೀಶ್ ಸಾಲ್ಯಾನ್ ಭಾಗವಹಿಸಿದರು.
ಪೂರ್ವ ರಂಗ – ಯಕ್ಷಗಾನ ಗೋಷ್ಠಿ-ನಾಟ್ಯ ಮಂಜರಿ :
ಮಧ್ಯಾಹ್ನ ಯಕ್ಷಪ್ರಯೋಗ ಕಾರ್ಯಕ್ರಮವು ಥಿಯೇಟರ್ ಯಕ್ಷ ಇವರಿಂದ ಸಂಕ್ಷಿಪ್ತ ಪೂರ್ವರಂಗ ಮತ್ತು ಪಂಪಾತೀರ ಕಥಾನಕ ಪ್ರಸ್ತುತಿಯು ಪೃಥ್ವಿರಾಜ ಕವತ್ತಾರು ಅವರ ನಿರ್ದೇಶನದಲ್ಲಿ ನಡೆಯಿತು. ಮತ್ತು ಯಕ್ಷಗಾನ ಚಿಂತನ ಮಂಥನ ಗೋಷ್ಠಿ ಮುಂಬಯಿ ಯಕ್ಷಗಾನ ಒಂದು ಅವಲೋಕನ ನಡೆಯಿತು. ಮುಂಬಯಿ ವಿಮರ್ಶಕ ಡಾ| ವೈ. ವಿ. ಮಧುಸೂದನ್ ರಾವ್ ಅವರು ಪ್ರಬಂಧ ಮಂಡಿಸಿದರು. ಯಕ್ಷಗಾನ ಕಲಾವಿದೆ ಗೀತಾ ಎಲ್. ಭಟ್ ಮತ್ತು ವಿಮರ್ಶಕ ಕೋಲ್ಕಾರು ರಾಜು ಶೆಟ್ಟಿ ಅವರು ಪ್ರತಿಕ್ರಿಯಿಸಿದರು.
ಯಕ್ಷಗಾನ ಮಂಜರಿ ಕಾರ್ಯಕ್ರಮ ನಡೆದಿದ್ದು, ಹಿಮ್ಮೇಳದಲ್ಲಿ ಭರತ್ ಶೆಟ್ಟಿ ಸಿದ್ದಕಟ್ಟೆ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ರೋಹಿತ್ ಉಚ್ಚಿಲ್, ಮುಮ್ಮೇಳದಲ್ಲಿ ದಿವಾಕರ ರೈ ಸಂಪಾಜೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರು ಭಾಗವಹಿಸಿದರು.
ಮಹಿಳಾ ಮತ್ತು ಮಕ್ಕಳ ಯಕ್ಷಗಾನ ವಿಷಯದಲ್ಲಿ ಗೋಷ್ಠಿ ನಡೆದಿದ್ದು, ದ್ಯಾನಿಧಿ ಪದವಿ ಪೂರ್ವ ತುಮಕೂರು ಇದರ ಪ್ರಾಧ್ಯಾಪಕಿ ಡಾ। ಆರತಿ ಪಟ್ಟಮೆ ಮಹಿಳಾ ಯಕ್ಷಗಾನ ಮತ್ತು ಬೆಂಗಳೂರಿನ ಪ್ರಾಧ್ಯಾಪಕ ದೀವಿತ್ ಎಸ್.ಕೆ ಪೆರಾಡಿ ಮಕ್ಕಳ ಯಕ್ಷಗಾನದ ಬಗ್ಗೆ ಉಪನ್ಯಾಸ ನೀಡಿದರು.
ತಾಳಮದ್ದಳೆ – ಯಕ್ಷಗಾನ ಚಿಂತನ-ಮಂಥನ:
ಬೀರೆ ಸಿರಿತ ಗಾಂಡೀವಿ ಯಕ್ಷಗಾನ ತಾಳಮದ್ದಳೆ ನಡೆದಿದ್ದು, ಹಿಮ್ಮೇಳದಲ್ಲಿ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ದೇವಿಪ್ರಸಾದ್ ಆಳ್ವ ತಲಪಾಡಿ, ಪ್ರಶಾಂತ್ ಶೆಟ್ಟಿ ವಗೆನಾಡು, ಹರಿಶ್ಚಂದ್ರ ನಾಯ್ಕ ಮಯೂರ ನಾಯ್ ಮುಮ್ಮೇಳದಲ್ಲಿ ಡಾ| ಎಂ. ಪ್ರಭಾಕರ ಜೋಶಿ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಕೆ. ರಮೇಶ ಆಚಾರ್ಯ, ಜಬ್ಬಾರ್ ಸಮೊ, ಗಣರಾಜ ಕುಂಬ್ಳೆ ಸದಾಶಿವ ಆಳ್ವ ತಲಪಾಡಿ, ಅಶೋಕ್ ಪಕ್ಕಳ, . ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರು ಭಾಗವಹಿಸಿದರು.
ಯಕ್ಷಗಾನ ಚಿಂತನ ಮಂಥನದ ಗೋಷ್ಠಿಯಲ್ಲಿ ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ ಕುರಿತು ಅರ್ಥದಾರಿಗಳಾದ ಸಮೊ, ಗಣರಾಜ ಕುಂಬ್ಳೆ ಮಾತನಾಡಿದರು. ಹಿರಿಯ ಕಲಾವಿದರುಗಲಾದ ಎಂ.ಕೆ. ರಮೇಶ ಆಚಾರ್ಯ, ಸದಾಶಿವ ಆಳ್ವ ತಲಪಾಡಿ ಪ್ರತಿಕ್ರಿಯಿಸಿದರು.
ಅಭಿವಂದನೆ:
ಅಭಿವಂದನ ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಂಭ್ರಮವನ್ನು ಆಯೋಜಿಸಲಾಗಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ। ಟಿ. – ಶ್ಯಾಮ್ ಭಟ್ ವಹಿಸಿದರು. ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟರಾಗಿ ಭಾಗವಹಿಸಿದರು. ಮುಖ್ಯ ಅತಿಥಿಯಾಗಿ ತುಳುವ ಮಹಾಸಭೆ ಇಂಟರ್ ನ್ಯಾಶನಲ್, ಕತಾರ್ ಘಟಕದ ಅಧ್ಯಕ್ಷ ಡಾ| ರವಿ ಶೆಟ್ಟಿಮೂಡಂಬೈಲು ಆಗಮಿಸಿದರು. ಫನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅವರು ಶುಭಶಂಸನೆಗೈದರು.
ಗೌರವ ಅತಿಥಿಗಳಾಗಿ ಬಂಟರ ಸಂಘ ಪುಣೆ ಗೌರವಾಧ್ಯಕ್ಷ ಸಂತೋಷ್ ಶೆಟ್ಟರನ್ನ ಕುರ್ಕಿಲ ಬೆಟ್ಟು ಅಧ್ಯಕ್ಷ ಅಜಿತ್ ಹೆಗ್ಡೆ ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ಆನಂದ ಶೆಟ್ಟಿ, ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ
ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಸೂರಿಂಜೆ, ಕಚೂರು ನಾಗೇಶ್ವರ ದೇವಸ್ಥಾನ ಆಡಳಿತ ಮೊಕ್ತಸರ ಸುರೇಶ್ ಭಂಡಾರಿ ಕಡಂದಲೆ, ಬಂಟರ ಭವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಬೋಧ ಭಂಡಾರಿ, ತುಳುಕೂಟ ಪುಣೆ ಅಧ್ಯಕ್ಷ ದಿನೇಶ್ ಶೆಟ್ಟಿಕಳತ್ತೂರು, ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಜಿಎಸ್ ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಭಾಂಡುಪ್ ಸಿಎಂಡಿ ಶಂಕರ್ ಶೆಟ್ಟಿ, ತ್ರಿವೇಣಿ ಮ್ಯಾನೇಜ್‌ಮೆಂಟ್ ಕನ್ಸಲ್ಸ್ ಪ್ರೈವೇಟ್ ಲಿಮಿಟೆಟ್ ಇದರ ಮನೋರಮಾ ಎಂ. ಬಿ. ಶೆಟ್ಟಿ, ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಆರ್. ಶೆಟ್ಟಿ,
ಕಲಾ ಪೋಷಕ ಸತೀಶ್ – ಶೆಟ್ಟಿ ಅಜೆಕಾರು, ಬಂಟರ ಸಂಘ ಕುರ್ಲಾ ಭಾಂಡುನ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ಇನ್ನಾ ಅವರು ಪಾಲ್ಗೊಡಿದ್ದರು.
ಕಲಾ ಗೌರವ ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ:
ಸಮಾರಂಭದಲ್ಲಿ ಕಲಾ ಗೌರವ ರಜತ ಯಕ್ಷರಕ್ಷಾ ಪ್ರಶಸ್ತಿಯನ್ನು ಅಂಬಿಕಾ ಮಂದಿರ ವಿದ್ಯಾವಿಹಾರ್ ಪ್ರಧಾನ ಅರ್ಚಕ ಹರಿದಾನ್ ಭಟ್ ಪೆರ್ಣಂಕಿಲ, ಬಿಸ್ ಕೆಬಿ. ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ರಾವ್, ಕಲಾಪೋಷಕ ಪದ್ಮನಾಭ ಶೆಟ್ಟಿ ವರ್ಲಿ, ಕಲಾ ಪೋಷಕ ರವಿ ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು.
ಸಾಧಕ ರಜತ ಯಕ್ಷರಕ್ಷಾ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದರುಗಳಾದ ದಾಮೋದರ ಶೆಟ್ಟಿ ಇರುವೈಲು, ಪ್ರಶಾಂತ್ ಶೆಟ್ಟಿ, ಮಹೇಂದ್ರ ಶೆಟ್ಟಿ ನಂದ್ರೋಳ್ಳಿ, ಅಶೋಕ್ ಕುಮಾರ್ ಕೊಡ್ಯಡ್ಕ ಆಶೋಕ್ ಕಾರ್ನಾಡ್, ಪ್ರಿಯ ಸರೋಜಾ ದೇವಿ, ಪತ್ರಕರ್ತ ದಿನೇಶ್ ಕುಲಾಲ್, ರಂಗಕರ್ಮಿ ಗುಣಪಾಲ ಉಡುಪಿ, ಯಕ್ಷಗಾನ ಕಲಾವಿದರುಗಳಾದ ಭಾಸ್ಕರ ಪೂಜಾರಿ ಉಡುಪಿ, ನಾಗೇಶ್ ಪೊಳಲಿ, ರಂಗಕರ್ಮಿ ಮನೋಹರ್ ಶೆಟ್ಟಿ ನಂದಳಿಕೆ, ಸಂತೋಷ್ ದೇವಾಡಿಗ, ಹಿರಿಯ ಪತ್ರಕರ್ತರಾದ ಪ್ರಕಾಶ ಹೆಗ್ಡೆ ಕುಂಠಿನಿ, ರಮೇಶ ಜಿನ್ನಪ್ಪ ಮರೋಲಿ, ಮದ್ದಳೆವಾದಕ ಮಧುಸೂದನ್ ಪಾಲನ್, ನಾರಾಯಣ್ ಶೆಟ್ಟಿ, ಗೀತಾ ಎಲ್. ಭಟ್. ಲೇಖಕಿ ಸವಿತಾ ಸುರೇಶ್ ಶೆಟ್ಟಿ, ಭಾಗವತ ಜಯಲಕ್ಷ್ಮೀ ದೇವಾಡಿಗ, ಸುಜಲಾ ಅಜಿತ್ ಶೆಟ್ಟಿ ಯಕ್ಷಗಾನ ಛಾಯಚಿತ್ರಕಾರ ಮನೋಹರ್ ಎಸ್. ಕುಂದರ್ ಅವರಿಗೆ ಪ್ರದಾನಿಸಲಾಯಿತು. ಅಲ್ಲದೆ ನಗರದ ವಿವಿಧ ಸಂಘ-ಸಂಸ್ಥೆಗಳಿಗೆ ರಜತ ಗೌರವಾರ್ಪಣೆಯನ್ನು ಗಣ್ಯರ ಸಮ್ಮುಖದಲ್ಲಿ ಸಲ್ಲಿಸಲಾಯಿತು.
ಚಕ್ರವ್ಯೂಹ ಯಕ್ಷಗಾನ:
ಯಕ್ಷ ಸಂಜೀವ ಯಕ್ಷಗಾನ ಕೇಂದ್ರ ಉಡುಪಿ ಕಲಾವಿದ ರಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು. ಸಮ್ಮೇಳನದಲ್ಲಿ ಕನ್ನಡಿಗರು, ಯಕ್ಷಗಾನ ಕಲಾಭಿಮಾನಿಗಳು, ಕಲಾವಿದರು, ಸಾಹಿತ್ಯಾಭಿಮಾನಿಗಳು ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು.



























