ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

0

ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಮೂರೂ ಕ್ಷೇತ್ರದ ವಿಜಯದಿಂದಾಗಿ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿರುವುದು ಸ್ಪಷ್ಟ ಆಗಿದೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವ ಕುಮಾರ್ ರವರ ಕಾರ್ಯ ವೈಖರಿಯನ್ನು ಜನತೆ ಒಪ್ಪಿ ಕೊಂಡಿದ್ದಾರೆ.ಜನರ ಮನೆಗೆ ತಲುಪುವ ವಿವಿಧ ಭಾಗ್ಯಗಳ ಸೇವೆಯನ್ನು ಜನ ಒಪ್ಪಿ ಕೊಂಡಿರುವುದು ಈ ಚುನಾವಣೆಯಲ್ಲಿ ಸ್ಪಷ್ಟ ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಮೂರೂ ವಿಧಾನಸಭಾ ಕ್ಷೇತ್ರಗಳ ಗೆಲುವು ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ. ಕ್ಲೀನ್ ಇಮೇಜನ್ನು ಹೊಂದಿರುವ ಸಿದ್ದರಾಮಯ್ಯನವರು ಕಳಂಕರಹಿತ ಮುಖ್ಯಮಂತ್ರಿ ಹಾಗೂ ಡಿ ಕೆ ಶಿವ ಕುಮಾರ್ ರವರು ಉತ್ತಮ ಆಡಳಿತಗಾರ ಎಂಬುದನ್ನು ಮತದಾರ ಪ್ರಭುಗಳು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಕಾಂಗ್ರೆಸ್ ಆಡಳಿತವು ರಾಜ್ಯದ ಜನತೆಯ ಮನಸ್ಸು ಗೆದ್ದಿದೆ ಎನ್ನುವುದಕ್ಕೆ ಇಂದಿನ ತೀರ್ಪು ಸಾಕ್ಷಿಯಾಗಿದೆ. ಕಾಂಗ್ರೆಸ್ ಆಡಳಿತವನ್ನು ಪೂರ್ಣ ಮನಸ್ಸಿನಿಂದ ಬೆಂಬಲಿಸಿದ ಮತದಾರ ಪ್ರಭುವಿಗೆ ಧನ್ಯವಾದಗಳು ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

   

LEAVE A REPLY

Please enter your comment!
Please enter your name here