
ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖರಾಗಿ ಅಜೆಕಾರು ವ್ಯವಸಾಯ ಸಂಘದ ನಿದೇ೯ಶಕರಾದ ವಿಜೇತಾ ಪೈ ಆಯ್ಕೆ.
ದಾವಣಗೆರೆಯ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನವೆಂಬರ್ 22 ಶುಕ್ರವಾರದಂದು ಜರುಗಿದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ವಿಜೇತಾ ಪೈಯವರನ್ನು ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಮಹಿಳಾ ಪ್ರಮುಖರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕರಾದ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹರಾದ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯರಾದ ಅರವಿಂದ ದೇಶಪಾಂಡೆ, ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷರಾದ ಬಾಗಲಕೋಟೆಯ ರಾಜಶೇಖರ ಶೀಲವಂತ,ನೂತನ ಅಧ್ಯಕ್ಷರಾದ ದಾವಣಗೆರೆಯ ಪ್ರಭುದೇವ ಆರ್ ಎಂ, ರಾಯಚೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.












