ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ ಭಾಗ-2 ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ

0

ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ ಭಾಗ-2 ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ

ಕಾರ್ಕಳ: ವಿಲಾಸ್ ಕುಮಾರ್ ನಿಟ್ಟೆ ಅವರು ಪ್ರಸಕ್ತ ವರ್ಷದಲ್ಲಿ ರಚಿಸಿರುವ ದೈವ ಪ್ರಧಾನ ತುಳು ಸಾಮಾಜಿಕ ನಾಟಕ “ಗಗ್ಗರ (ಭಾಗ-2)” ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ತುಳು ಕೂಟ ಕುಡ್ಲ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಅವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಿದ್ದು, ವಿಜೇತರಿಗೆ ಪ್ರಶಸ್ತಿಯನ್ನು ಏ.14ರಂದು ಬಿಸು ಪರ್ಬ ಆಚರಣೆಯ ಸಂದರ್ಭ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ವಿಜಯ ಕರ್ನಾಟಕ ದಿನಪತ್ರಿಕೆಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವಿಲಾಸ್ ಕುಮಾರ್ ಅವರ ಗಗ್ಗರ (ಭಾಗ-೧) ಮತ್ತು ಕಂಬಳದ ನಡುಟೊಂಜಿ ಕಥೆ ನಾಟಕಕ್ಕೆ ಈ ಹಿಂದೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿತ್ತು.

ಗುತ್ತುದ ಗುರ್ಕಾರೆ, ಮುತ್ತೈಸಿ ಮದಿಮಾಲ್, ತೆಲಿಕೆದ ನಲಿಕೆ, ಅಲೆಗೇಪ ಮದಿಮೆ?,ಮಾತರ‍್ಲ ಬರೋಡು, ಪನರೆ ಧೈರ್ಯಜ್ಜಿ, ಬದಿ ಬಂಗಾರ್, ಆಪುಂಡ ಅಲೆನೆ, ಕಥೆ ಕಟ್ಟುವೆರ್, ಬರೆಪುನಾಯೆ ಬರೆತ್ತುಜೆ, ಅಂದಾಜಿ ಆಪುಜಿ, ಪನಂದೆ ಪೋಯೆರ್ ಮುಂತಾದ ತುಳು ನಾಟಕಗಳನ್ನು ರಚಿಸಿರುವ ಅವರು ಮಾತೃಮಾಯ ಯಕ್ಷಗಾನ ಪ್ರಸಂಗ ಕೂಡಾ ರಚಿಸಿದ್ದರು.

   

LEAVE A REPLY

Please enter your comment!
Please enter your name here