




ಭ್ರಷ್ಟಚಾರ ಮತ್ತು ಭಯ ಮುಕ್ತ ಸೌಹಾರ್ದ ಸಮಾಜಕ್ಕಾಗಿ ಕಾಂಗ್ರೆಸನ್ನು ಬೆಂಬಲಿಸಿ : ಸುರೇಂದ್ರ ಶೆಟ್ಟಿ ಹಿರಿಯಂಗಡಿ
ಕಾರ್ಕಳ: ಭ್ರಷ್ಟಚಾರ ಮತ್ತು ಭಯ ಮುಕ್ತ ಸೌಹಾರ್ದ ಸಮಾಜಕ್ಕಾಗಿ ಕಾರ್ಕಳದ ಮತದಾರರು ಕಾಂಗ್ರೆಸನ್ನು ಬೆಂಬಲಿಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮ ಪಾಲು ಮತ್ತು ಸಮ ಬಾಳನ್ನು ಕಲ್ಪಿಸಿಕೊಡುವಲ್ಲಿ ಕಾಂಗ್ರೆಸ್ ಬದ್ದವಾಗಿದೆ. ಎಂದು ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ ಹಿರಿಯಂಗಡಿ ಹೇಳಿದ್ದಾರೆ.
ಅವರು ಕಾರ್ಕಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಪರ ಮಾತಯಾಚಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದರಲ್ಲಿ ಕಾರ್ಕಳ ಕಾಂಗ್ರೆಸ್‌ನ ಒಂದು ಸ್ಥಾನವಿರಬೇಕು ಎನ್ನುವುದು ನಮ್ಮ ಪ್ರಯತ್ನ. 2013ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭ ಘೋಷಿಸಿದ ಪ್ರಣಾಳಿಕೆಯ ಬಹುತೇಕ ಅಂಶಗಳನ್ನು ಜಾರಿಗೊಳಿಸಿದ ಕೀರ್ತಿ ನಮ್ಮ ಸರಕಾರಕ್ಕಿದೆ. ಅನ್ನಭಾಗ್ಯ ಯೋಜನೆಯಿಂದ ಹಸಿವು ಮುಕ್ತ ಕರ್ನಾಟಕಕ್ಕೆ ನಡೆಸಿದ ಮೊದಲ ಹೆಜ್ಜೆ ಜನಮನ್ನಣೆಗೆ ಸಾಕ್ಷಿಯಾಗಿದೆ. ಬಡವರು ಮತ್ತು ಮಧ್ಯಮವರ್ಗದ ಜನತೆಗೆ ಪೂರಕವಾದ ಅನೇಕ ಯೋಜನೆಗಳು ಅಭಿವೃದ್ದಿಗೆ ಮುನ್ನಡೆ ಬರೆದಿತ್ತು ಎಂದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆಯಿಟ್ಟ ಪಕ್ಷ ಕಾಂಗ್ರೆಸ್. ಸಮಾಜದಲ್ಲಿ ಎಲ್ಲೂ ಅಪನಂಬಿಕೆಯನ್ನು ಸೃಷ್ಟಿಸುವಂತಹ ಕೆಲಸವನ್ನು ನಾವು ಮಾಡಿಲ್ಲ. ಈ ಬಾರಿಯೂ ಜನಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಕಾರ್ಕಳದಲ್ಲೂ ಜನತೆ ಬದಲಾವಣೆಯನ್ನು ಬಯಸುತ್ತಿದ್ದು, ಕಾಂಗ್ರೆಸ್‌ನ ಪರ ಒಲವನ್ನು ವ್ಯಕ್ತಪಡಿಸಿದ್ದಾರೆ. ಉದಯ ಶೆಟ್ಟಿ ಮುನಿಯಾಲು ಅವರು ದಾಖಲೆಯ ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಚುನಾಯಿತರಾಗುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.