
ಕಾದಂಬರಿಯು ನಮ್ಮ ಜೀವನದ ಪ್ರತಿಬಿಂಬ-ಡಾ. ವಸಂತ್ ಕುಮಾರ್ ಪೆರ್ಲ
ಕೆ. ಬಾಲಕೃಷ್ಣ ರಾವ್ ಬರೆದ ‘ಪಥ’ ಕಾದಂಬರಿ ಬಿಡುಗಡೆ
‘ಕಾದಂಬರಿಯು ನಮ್ಮ ಜೀವನದ ಕನ್ನಡಿ, ಇದು ಸಮಾಜವನ್ನು ಒಂದುಗೂಡಿಸುವ ಸರಪಳಿಯ ಕೊಂಡಿ’ ಎಂದು ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತ್ ಕುಮಾರ್ ಪೆರ್ಲಅಭಿಪ್ರಾಯಪಟ್ಟರು.ಅವರು ಕೆ. ಬಾಲಕೃಷ್ಣ ರಾವ್ ಇವರು ಬರೆದಿರುವ ‘ಪಥ’ ಕಾದಂಬರಿಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.
”ಇಂದು ನಾವು ಸಂಬಂಧಗಳ ಕೊಂಡಿಯನ್ನು ಕಳೆದುಕೊಂಡಿದ್ದೇವೆ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಾಗಿ ಬದುಕುತ್ತಿದ್ದೆವೆ.ಮಕ್ಕಳು ಒಂದು ಕಡೆ, ತಂದೆ ತಾಯಿ ಇನ್ನೊಂದು ಕಡೆ.ಹೀಗೆ ಬೇರೆ ಬೇರೆ ಕಡೆ ಚದುರಿ ಹೋಗಿರುವುದರಿಂದ ಭಾವನೆಗಳಿಗೆ ಬೆಲೆ ಇಲ್ಲದಾಗಿದೆ.ಮನೆಯೊಳಗೂ ಸದಸ್ಯರು ಮಾತನಾಡಬೇಕಿದ್ರೆ ಮೊಬೈಲ್ ನಲ್ಲಿಯೇ ಮಾತನಾಡುವ ಸಮಯ ಇದಾಗಿದೆ”
”ಕೆ. ಬಾಲಕೃಷ್ಣ ರಾವ್ ಬರೆದ ಕಾದಂಬರಿಯು ಇಂದಿನ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ ಆಗಿದೆ. ಇವರು ಬರೆದ ‘ಪಥ’ ಕಾದಂಬರಿ ತನ್ನದೇ ಆದ ಶೈಲಿ ಯನ್ನು ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತ ನಡೆಯುವ ಘಟನೆಗಳನ್ನು ಪ್ರತಿಬಿಂಬಿಸುತ್ತವೆ. ಈ ಕಾದಂಬರಿ ಓದುಗರನ್ನು ವಿಶಿಷ್ಟ ಶೈಲಿಯ ಕಡೆಗೆ ಕೊಂಡೋಯ್ಯುತದೆ” ಎಂದು ಹೇಳಿದರು.
ಡಾ. ಜನಾರ್ದನ ಭಟ್ ರವರು ಮಾತನಾಡಿ ‘ಪಥ’ ಕಾದಂಬರಿಯ ಸಮಗ್ರ ವಿಮರ್ಶೆ ಮಾಡಿದರು. ”ಈ ಕಾದಂಬರಿಯು ಒಟ್ಟಿಗೆ ಐದು ಆಯಾಮಗಳನ್ನು ಹೊಂದಿದ್ದು, ಪ್ರತಿಯೊಂದು ಆಯಾಮಕ್ಕೂ ಸರಪಣಿಗಳ ಕೊಂಡಿಯಂತೆ ಹೆಣಿದುಕೊಂಡಿದೆ. ಪ್ರತಿಯೊಂದು ಆಯಾಮವೂ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದೆ. ನಡು ನಡುವೆ ಇರುವ ತಿರುವುಗಳು ವೈಜ್ಞಾನಿಕವಾಗಿದೆ. ಕೆಲವು ತಮಾಷೆಯ ಸಂಭಾಷಣೆಗಳು ಓದುಗರನ್ನು ಸಂತೋಷಪಡಿಸುತದೆ. ಕಾದಂಬರಿಯ ಕಥೆಯ ನಾಯಕ ಸದಾನಂದನ ಬದುಕಿನ ಏರಿತಗಳು, ಮಗಳು ಶಾರದೆಯ ಜೀವನ ಈಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತದೆ. ಸದಾನಂದ ವಿದ್ಯೆಯ ಪಥದೊಂದಿಗೆ ಐಎಎಸ್ ಆಫೀಸರ್ ಆಗಿ ಜೀವನದಲ್ಲಿ ಗೌರವದ ಸ್ಥಾನ ಗಳಿಸುವ ಗುರಿಯನ್ನು ಹೊಂದಿ, ಕೊನೆಗೂ ಅದನ್ನು ಪಡೆದು, ಹಲವಾರು ಸವಾಲುಗಳನ್ನು ಎದುರಿಸಿ ಗೆಲ್ಲುತಾನೇ.ಒಂದು ಕಡೆ ಆಡಳಿತ ವ್ಯವಸ್ಥೆಯಲ್ಲಿ ಎದುರಾಗುವ ಬೆದರಿಕೆ, ಇನ್ನೊಂದು ಕಡೆ ಕುಟುಂಬದಲ್ಲಿ ಉಂಟಾಗುವ ಸೋಲು, ಇವುಗಳನ್ನು ನಿಭಾಯಿಸುವ ರೀತಿ ಕಾದಂಬರಿಯನ್ನು ಕೂತುಹಲದಿಂದ ಓದುಗನನ್ನು ಓದುವಂತೆ ಮಾಡುತದೆ. ಈ ಕಾದಂಬರಿಯ ಕಥೆ ಟಿ. ವಿ. ಸೀರಿಯಲ್ ಅಥವಾ ಚಲನಚಿತ್ರಗಳಿಗೆ ಸರಿಹೊಂದುತ್ತದೆ, ಕಥೆಯ ಕೊನೆಯಲ್ಲಿ ಕಥಾನಾಯಕ, ಅನುಭವಿಸುವ ಏಕಾಂಗೀತನ ಎಲ್ಲರ ಮನೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ” ಎಂದು ಹೇಳಿದರು.
ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಫ್ರೋಫೆಸರ್. ಬಿ. ಪದ್ಮನಾಭಗೌಡ ಮಾತನಾಡಿ ‘ಗಣಿತ ಮತ್ತು ಸಾಹಿತ್ಯ ಎರಡನ್ನೂ ಒಗ್ಗೂಡಿಸಿರುವ ಕೆ. ಬಾಲಕೃಷ್ಣ ರಾವ್ ಅವರದ್ದು ವಿಶೇಷ ವ್ಯಕ್ತಿತ್ವ, ವಿದ್ಯಾರ್ಥಿ ದೆಸೆಯಿಂದಲೂ ಇವರು ಕಥೆ, ಕವನ, ಲೀಖನಗಳನ್ನು ಬರೆಯುತಿದ್ದು, ಮಂಗಳೂರು ಆಕಾಶವಾಣಿಯಲ್ಲಿಯೂ ಇವರ ಕಥೆ, ಕವನ, ಚಿಂತನ ಕಾರ್ಯಕ್ರಮಗಳ ಪ್ರಸಾರವಾಗಿದೆ’ ಎಂದು ಹೇಳಿದರು.
ಇತ್ತೀಚಿಗೆ ನಿಧನರಾದ ಸಾಹಿತಿ ಫ್ರೋ.ಹೆರಿಂಜೆ ಕೃಷ್ಣ ಭಟ್ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.ಪ್ರಾರ್ಥನೆಯನ್ನು ವೈ. ಅನಂತ ಪದ್ಮನಾಭ ಭಟ್ ನೆರವೇರಿಸಿದರು.ವೇದಿಕೆಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಕೋಶಧಿಕಾರಿ ನಿತ್ಯಾನಂದ ಪೈ, ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷರಾದ ತುಕಾರಾಮ ನಾಯಕ್, ಕೃತಿಕಾರರಾದ ಕೆ. ಬಾಲಕೃಷ್ಣರಾವ್ ಉಪಸ್ಥಿತರಿದ್ದರು.ಡಾ. ಸುಮತಿ. ಪಿ. ಕಾರ್ಯಕ್ರಮ ನಿರೂಪಿಸಿದರು. ಬೇಬಿ. ಕೆ. ಈಶ್ವರ ಮಂಗಳ ಸಹಕರಿಸಿದರು.













