ಕಾರ್ಕಳ : ಹುಟ್ಟಿದ ದಿನದ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ನಿಧನ

0

ಕಾರ್ಕಳ:ಹುಟ್ಟಿದ ದಿನದ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ನಿಧನ

ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕುಕ್ಕಂದೂರು ಗ್ರಾಮದ ಪರಪ್ಪುವಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತರನ್ನು ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ, ಆಟೋ ಚಾಲಕ, ಕುಕ್ಕುಂದೂರು ಗ್ರಾಮದ ನಿವಾಸಿ, ಸುಬ್ರಹ್ಮಣ್ಯ ಸಾಲ್ಯಾನ್ (36) ಎಂದು ಗುರುತಿಸಲಾಗಿದೆ. ದುರದೃಷ್ಟಕರವೇನೆಂದರೆ ಸುಬ್ರಹ್ಮಣ್ಯ ಸಾಲ್ಯಾನ್ ಅವರ ಹುಟ್ಟಿದ ದಿನದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಕಾರ್ಮೋಡ ಹರಡಿದೆ.

ಶನಿವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಐಸ್ ಕ್ರೀಮ್ ಖರೀದಿಸಿ, ಮನೆಗೆ ಹಿಂತಿರುಗುವ ವೇಳೆ ಸುಬ್ರಹ್ಮಣ್ಯ ಅವರು ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟರ್ ಸಹಿತ ಹೊಳೆಗೆ ಬಿದ್ದಿದ್ದಾರೆ. ಸ್ಥಳೀಯರು ರಾತ್ರಿಯಿಡೀ ಹುಡುಕಾಡಿದರೂ ಸುಬ್ರಹ್ಮಣ್ಯ ಅವರ ಸುಳಿವು ಸಿಕ್ಕಿರಲಿಲ್ಲ. ಇಂದು ಪುನಃ ಹುಡುಕಾಡಿದ ವೇಳೆ ಸೇತುವೆಯಡಿಯಲ್ಲಿ ಸ್ಕೂಟರ್ ನೊಂದಿಗೆ ಮೃತದೇಹ ಪತ್ತೆಯಾಗಿದೆ.

   

LEAVE A REPLY

Please enter your comment!
Please enter your name here