⭕ಕಾರ್ಕಳ : CATC ಶಿಬಿರದಲ್ಲಿ NCC ಕ್ಯಾಡೆಟ್‌ಗಳಿಗೆ ವಿಪತ್ತು ಪರಿಹಾರ ನಿರ್ವಹಣಾ ಕೌಶಲ ತರಬೇತಿ

0

ಕಾರ್ಕಳ : CATC ಶಿಬಿರದಲ್ಲಿ NCC ಕ್ಯಾಡೆಟ್‌ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ

21 ಕರ್ನಾಟಕ ಬೆಟಾಲಿಯನ್‌ NCC ಅಯೋಜಿಸಿದ ಹತ್ತು ದಿನಗಳ ಕಂಬೈನ್ಡ್‌ ಆನ್ಯುವಲ್‌ ಟ್ರೈನಿಂಗ್‌ ಕ್ಯಾಂಪ್‌ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು.

ಈ ತರಬೇತಿ ಶಿಬಿರದಲ್ಲಿ 592 ಎನ್.ಸಿ.ಸಿ ಕ್ಯಾಡೆಟ್‌ಗಳು ಭಾಗಹಿಸಿದ್ದು, ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ, ಫೈರಿಂಗ್‌, ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು.

ಯುವ ಆಪದ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ ನಿರ್ವಹಣಾ ಪ್ರಾಧಿಕಾರ ಪ್ರತಿನಿಧಿಗಳಿಂದ ಆಯ್ದ ಕೆಡೆಟ್‌ಗಳಿಗೆ ವಿಪತ್ತು ಪರಿಹಾರ ನಿರ್ವಹಣೆಯ ತರಬೇತಿಯನ್ನು ನೀಡಲಾಯಿತು.

ಮಂಗಳೂರಿನ ಪೋಲಿಸ್‌ ಆಯುಕ್ತ ಕಛೇರಿಯ ವತಿಯಿಂದ ಜೂನ್‌ 5,2025 ರಂದು ನಕ್ರೆಯಲ್ಲಿರುವ ಫೈರಿಂಗ್‌ ರೇಂಜ್‌ನಲ್ಲಿ”ಸ್ಟನ್‌ and ಸ್ಮೋಕ್‌ ಗ್ರೆನೇಡ್‌ ಫೈರಿಂಗ್‌ “ ಮತ್ತು ಗಲಭೆ ನಿಯಂತ್ರಣ ಡ್ರಿಲ್‌ಗಳ ನೇರಾ ಪ್ರಾತ್ಯಕ್ಷತೆಯನ್ನು ಕೂಡಾ ನೀಡಲಾಯಿತು.

CATC ಯನ್ನು ಎನ್.ಸಿ.ಸಿ. ಗ್ರೂಪ್‌ ಪ್ರಧಾನ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದು , ಮಂಗಳೂರು ಗ್ರೂಪ್ ಕಮಾಂಡರ್‌ ಕರ್ನಲ್‌ ವಿರಾಜ್‌ ಕಾಮತ್ ಕ್ಯಾಡೆಟ್‌ಗಳೊಂದಿಗೆ ಸಂವಹನ ನಡೆಸಿ , ತರಬೇತಿ ಶಿಬಿರದ ವ್ಯವಸ್ಥೆಯ ಪರಿಶೀಲನೆ ಮಾಡಿದರು.

   

LEAVE A REPLY

Please enter your comment!
Please enter your name here