ಅಜೆಕಾರು : ನಾಯಿಗೆ ವಿಷ ಉಣಿಸಿದ ದುಷ್ಕರ್ಮಿಗಳು; ಆರೋಪಿಗಳ ಮಾಹಿತಿ ನೀಡಿದರೆ 50 ಸಾವಿರ ಬಹುಮಾನ

0

ಅಜೆಕಾರು : ನಾಯಿಗೆ ವಿಷ ಉಣಿಸಿದ ದುಷ್ಕರ್ಮಿಗಳು; ಆರೋಪಿಗಳ ಮಾಹಿತಿ ನೀಡಿದರೆ 50 ಸಾವಿರ ಬಹುಮಾನ

ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆಯಲ್ಲಿ ನಾಯಿಗೆ ವಿಷಹಾಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಪೆಟಾ ಸಂಸ್ಥೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಿದೆ.

ಜೂನ್ 6 ರಂದು ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ನಾಯಿ ಮೃತಪಟ್ಟ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನಾಯಿಗೆ ವಿಷ ಉಣಿಸಿರುವುದು ದೃಢಪಟ್ಟಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೆಟಾ ಸಂಸ್ಥೆಯು ನಾಯಿಗೆ ವಿಷ ಉಣಿಸಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ 50 ಸಾವಿರ ರೂ. ಬಹುಮಾನ ಘೋಷಿಸಿದೆ. ಈ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

   

LEAVE A REPLY

Please enter your comment!
Please enter your name here