
ವಿದ್ಯಾರ್ಥಿ ಬಸ್ ಪಾಸ್ ಗೆ ಅರ್ಜಿ ಅಹ್ವಾನ
ಕ. ರಾ. ರ. ಸ. ನಿ. ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್ https://sevasinduservices.karnataka.gov.in/busspasssevices ನಲ್ಲಿ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ ಪಾಸ್ ಪಾಸ್ ಗಾಗಿ ಅರ್ಜಿ ಸಲ್ಲಿಸಲು ಡಿಕ್ಲರೇಶನ್ ಫಾರಂ ಅನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ಅಥವಾ ಕ. ರಾ. ರ. ಸ. ನಿ ವೆಬ್ಸೈಟ್ https://ksrtc.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಂಡು ಡಿಕ್ಲೆರೇಷನ್ ಫಾರಂ ಅನ್ನು ಭರ್ತಿ ಮಾಡಿ ಶಾಲಾ ಅಥವಾ ಕಾಲೇಜು ಮುಖ್ಯೋಪಾಧ್ಯಾಯರ ಅಥವಾ ಪ್ರಾಂಶುಪಾಲರ ಸಹಿ ಅಥವಾ ಕಾಲೇಜು ಮೊಹರಿನೊಂದಿಗೆ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು.
ನಿಗಮ ವ್ಯಾಪ್ತಿಯ ಪಾಸ್ ವಿತರಣೆ ಕೌಂಟರ್ ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://ksrtc.karnataka.gov.in ಪ್ರಕಟಿಸಲಾಗಿದೆ ಎಂದು ಮಂಗಳೂರು ಕ. ರಾ. ರ. ಸ. ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












