Sunday, January 25, 2026
Google search engine
Homeಕಾರ್ಕಳಕಾರ್ಕಳ: ಸ್ಟೇಷನರಿ ಮತ್ತು ಪುಸ್ತಕ ವ್ಯಾಪಾರಕ್ಕೆ ಪರಿಕರ ಒದಗಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ; ಆರೋಪಿ...

ಕಾರ್ಕಳ: ಸ್ಟೇಷನರಿ ಮತ್ತು ಪುಸ್ತಕ ವ್ಯಾಪಾರಕ್ಕೆ ಪರಿಕರ ಒದಗಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ; ಆರೋಪಿ ಸೆರೆ

ಕಾರ್ಕಳ: ಸ್ಟೇಷನರಿ ಮತ್ತು ಪುಸ್ತಕ ವ್ಯಾಪಾರಕ್ಕೆ ಪರಿಕರ ಒದಗಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ; ಆರೋಪಿ ಸೆರೆ

ಸ್ಟೇಷನರಿ ಮತ್ತು ಪುಸ್ತಕ ವ್ಯಾಪಾರಕ್ಕೆ ಪರಿಕರ ಒದಗಿಸುವುದಾಗಿ ರಂಗನಪಲ್ಕೆ ಕೌಡೂರು ಗ್ರಾಮದ ಕವಿತಾ ಕೃಪಾಲಿನಿ ಅವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಯತ್ನಿಸಿ ದೂಪದಕಟ್ಟೆಯ ರಾಘವೇಂದ್ರ ಎಸ್. ಎಂಬಾತನಿಂದ ಮೋಸ ಹೋಗಿದ್ದಾರೆ. ಆರೋಪಿಯು ಜೆರಾಕ್ಸ್, ಲ್ಯಾಮಿನೇಷನ್ ಯಂತ್ರಗಳು, ಲ್ಯಾಪ್‌ಟಾಪ್ ಮತ್ತು ಇತರ ಪರಿಕರ ಕೊಡಿಸುವುದಾಗಿ ನಂಬಿಸಿ, ಲಕ್ಷ್ಮೀ ಎಂಟರ್ಪ್ರೈಸಸ್ ಹೆಸರಿನಲ್ಲಿ ನಕಲಿ ಕೊಟೇಶನ್ ನೀಡಿದ್ದಾನೆ.

ಕವಿತಾ ಅವರು ಕಣಜಾರು ಕೆನರಾ ಬ್ಯಾಂಕ್ ಶಾಖೆಯಿಂದ 9.50 ರೂ. ಪಡೆದಿದ್ದು, ಈ ಹಣವನ್ನು ಡಿ. 18ರಂದು ರಾಘವೇಂದ್ರ ಹೇಳಿದ ಖಾತೆಗೆ ಜಮೆ ಮಾಡಿದ್ದರು. ಹಣ ಜಮೆಯಾದ ಅನಂತರ 25 ದಿನಗಳಲ್ಲಿ ಸಾಮಗ್ರಿ ನೀಡುವುದಾಗಿ ರಾಘವೇಂದ್ರ ಭರವಸೆ ನೀಡಿದ್ದರೂ, ಅವುಗಳನ್ನು ನೀಡದೆ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಆರೋಪಿ ರಾಘವೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.

ಜೂ. 7ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments