ಮನೆಗೆ ಹೊಕ್ಕವ ಶಕ್ತಿ ನಮಗೂ ಇದೆ ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ ಜಾತಿ ಮತ ಧರ್ಮದ ‌ಬೇದವಿಲ್ಲದೆ ಜನ ಸೇವೆ ಮಾಡುವ ಉದಯ್ ಶೆಟ್ಟಿ ‌ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಸುಧಾಕರ್ ಶೆಟ್ಟಿ

0

ಜಾತಿ ಮತ ಧರ್ಮದ ‌ಬೇದವಿಲ್ಲದೆ ಜನ ಸೇವೆ ಮಾಡುವ ಉದಯ್ ಶೆಟ್ಟಿ ‌ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ

ಮನೆಗೆ ಹೊಕ್ಕವ ಶಕ್ತಿ ನಮಗೂ ಇದೆ ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ

ಸುಧಾಕರ್ ಶೆಟ್ಟಿ ತಾಲೂಕು ಪಂಚಾಯತ್ ಮಾಜಿ ಸದಸ್ಯರು.

ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿ ಧರ್ಮ ದ್ರೋಹದ ಕೆಲಸ ಮಾಡಿ ಕ್ಷೇತ್ರದ ಜನತೆಯಿಂದ ಉಗಿಸಿಕೊಂಡ ಶಾಸಕರು ಮತ್ತು ಅವರ ಸಹಚರರು ತಮ್ಮ ಮಾನ ಉಳಿಸಿಕೊಳ್ಳಲು ದಿನಕೊಂದು ಹೇಳಿಕೆಗಳನ್ನು ನೀಡಿ ಅಸ್ವಸ್ಥರಂತೆ ವರ್ತಿಸುತಿದ್ದರೆ, ಅವರ ಅಸ್ವಸ್ಥತೆಗೆ ಮದ್ದು ಮಾಡಬೇಕೆ ವಿನಃ ನಮ್ಮ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಲ್ಲ, ಜಾತಿ, ಮತ, ಧರ್ಮದ ಬೇದವಿಲ್ಲದೆ ಜನಸೇವೆ ಮಾಡುವ ಉದಯ್ ಶೆಟ್ಟಿಯವರ ವಿರುದ್ದ ಅಪಪ್ರಚಾರ ಸಹಿಸುವುದಿಲ್ಲ, ಮಹಾವೀರ ಹೆಗ್ಡೆಯವರ ಮನೆಗೆ ಹೊಕ್ಕುವ ಶಕ್ತಿ ನಮಗೂ ಇದೆ ಆದರೆ ಅದು ನಮ್ಮ ಸಂಸ್ಕೃತಿಯಲ್ಲ ಮುಂದೆ ಮಾತನಾಡುವಾಗ ಎಚ್ಚರವಿರಲಿ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರ ಸುಧಾಕರ್ ಶೆಟ್ಟಿ ಮುಡಾರು, ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ.

ಮಹಾವೀರ ಹೆಗ್ಡೆಯವರ ರಾಜಕೀಯ ಜೀವನ ಎಲ್ಲಿಂದ ಮತ್ತು ಹೇಗೆ ಪ್ರಾರಂಭವಾಗಿದೆ ಎನ್ನುವುದು ನನಗೆ ಸಂಪೂರ್ಣ ತಿಳಿದಿದೆ, ಶಾಸಕರೊಂದಿಗೆ ವೈಮನಸ್ಸು ಹೊಂದಿದ್ದಾಗ ಯಾರ ಜೊತೆ ಸೇರಿಕೊಂಡು ಶಡ್ಯಂತ್ರ ನಡೆಸಿದ್ದಾರೆ ಎನ್ನುವುದೂ ತಿಳಿದಿದೆ , ಶಾಸಕರ ವಿರುದ್ದ ವಿಷಕಾರುತಿದ್ದ ಅವರಿಗೆ ಈಗ ಪ್ರೀತಿ ಉಕ್ಕಲು ಏನೋ ಕಾರಣವಿರಬೇಕು ಎನ್ನುವ ಸಂಶಯ ಮೂಡುತ್ತದೆ, ಈಗ ಅವರನ್ನು ಮೆಚ್ಚಿಸಲು ಬಾಯಿಗೆ ಬಂದಂದೆ ಮಾತನಾಡಿದರೆ ತಕ್ಕ ಪ್ರತಿಫಲ ನೀಡುತ್ತೇವೆ ಎಂದರು.

ಉದಯ್ ಶೆಟ್ಟಿಯವರಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಇತರ ಅಸಹಾಯಕರ ಮನೆಯ ಶುಭ ಸಮಾರಂಭಗಳಿಗೆ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಆರ್ಥಿಕವಾಗಿ ಸಹಾಯ‌ ಮಾಡುವಾಗ ಎಂದೂ ಜಾತಿ, ಮತ, ಧರ್ಮ ನೋಡಲಿಲ್ಲ,‌ ತಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ಙು ಸಮಾಜಕ್ಕೆ ವಿನಿಯೋಗಿಸುತ್ತಾರೆ, ಆದರೆ ನಿಮ್ಮಂತವರ ಮನಸ್ಥಿತಿಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿದೆ ಇನ್ನಾದರು ನಕಲಿ ಪ್ರತಿಮೆ ಮಾಡಿ ಮೋಸ ಮಾಡಿದ ಪಾಪಕ್ಕೆ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೋಳ್ಳಿ ಇನ್ನೊಮ್ಮೆ ಅಪಪ್ರಚಾರ ಮಾಡಿದರೆ ನಿಮ್ಮದೇ ದಾಟಿಯಲ್ಲಿ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

 

   

LEAVE A REPLY

Please enter your comment!
Please enter your name here