ಹೆಬ್ರಿ: ಆರಂಭಿಕ ಶಿಕ್ಷಣವೇ ಉನ್ನತ ಶಿಕ್ಷಣಕ್ಕೆ ಆಧಾರ: ಎಚ್ ನಾಗರಾಜ ಶೆಟ್ಟಿ

0

ಹೆಬ್ರಿ: ಆರಂಭಿಕ ಶಿಕ್ಷಣವೇ ಉನ್ನತ ಶಿಕ್ಷಣಕ್ಕೆ ಆಧಾರ: ಎಚ್ ನಾಗರಾಜ ಶೆಟ್ಟಿ

ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ತಮ್ಮ ಸಂಸ್ಥೆಯಲ್ಲಿ ನಡೆದ ಎಲ್.ಕೆ.ಜಿ ಮಕ್ಕಳ ತರಗತಿ ಆರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬಾಲ್ಯದ ಆರಂಭಿಕ ಶಿಕ್ಷಣವು ಯೋಗ್ಯ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಅವರ ಉನ್ನತ ಶಿಕ್ಷಣಕ್ಕೆ ಅದೇ ಬುನಾದಿಯಾಗುತ್ತದೆ ಎಂದರು.

ಮುಂದುವರೆಸಿ ಮಾತನಾಡಿದ ಅವರು, ಆರಂಭಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾದದ್ದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅವರು ಮಾತನಾಡಿ, ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳ ಮನಸ್ಸು ಅರಳುವ ಸಮಯದಲ್ಲಿ ಪೋಷಕರಾದ ನಾವು ಮಕ್ಕಳ ಮನಸ್ಸಿನ ಮೇಲೆ ನಿಯಂತ್ರಣ ಹೇರಬಾರದು. ಮಕ್ಕಳಿಂದ ಸಾಧ್ಯವಾಗುವ ಸಣ್ಣ ಸಣ್ಣ ಕೆಲಸವನ್ನು ಮಕ್ಕಳಿಂದಲೇ ಮಾಡಿಸಿ ಅವರು ಸ್ವತಂತ್ರವಾಗಿ ಬದುಕಲು ಬಾಲ್ಯದಿಂದಲೇ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಎಸ್.ಆರ್. ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪ ಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ, ಕೋ-ಓರ್ಡಿನೇಟರ್ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೂರನೇ ತರಗತಿ ವಿದ್ಯಾರ್ಥಿನಿ ಪ್ರಿಶಾ ನಿರೂಪಿಸಿ, ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ವಂದಿಸಿದರು.

   

LEAVE A REPLY

Please enter your comment!
Please enter your name here