ಕಾರ್ಕಳ:ಬಿಜೆಪಿ ವಿರುದ್ದ ಕಾಂಗ್ರೆಸ್ ಧರಣಿ ಸತ್ಯಾಗ್ರಹ-ಸಮಯದಲ್ಲಿ ಬದಲಾವಣೆ

0

ಕಾರ್ಕಳ:ಬಿಜೆಪಿ ವಿರುದ್ದ ಕಾಂಗ್ರೆಸ್ ಧರಣಿ ಸತ್ಯಾಗ್ರಹ.

ಕಾರ್ಕಳ ಬ್ಲಾಕ್ ಕಾಂಗ್ರೇಸ್ ಆಶ್ರಯದಲ್ಲಿ ರಾಜ್ಯ ಸರಕಾರದ ವಿರುದ್ದ ಬಿಜೆಪಿ ಶಾಸಕ ಸುನೀಲ್ ಕುಮಾರ್ ರವರ ಸುಳ್ಳು ಆರೋಪ ಹಾಗೂ ಶಾಸಕರ ವೈಫಲ್ಯ ಮತ್ತು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ‌ ನೀಡಿದ ಬಿಜೆಪಿ ಯುವ ಮೋರ್ಚ ಮುಖಂಡನ ಬಂಧನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ ವನ್ನು ದಿನಾಂಕ 23 ಸೋಮವಾರ ಮಧ್ಯಾಹ್ನ 3:00 ಗಂಟೆಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಕಳ ಶಾಸಕರು ರಾಜ್ಯ ಸರಕಾರದ ಮೇಲೆ ಕೆಲವು ಸುಳ್ಳು ಆರೋಪಗಳನ್ನು ಹೊರಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ ಆದರೆ ಅವರು ಹೊರಿಸಿರುವ ಅರೋಪಗಳಿಗೆ ಅವರ ಬಿಜೆಪಿ ಸರಕಾರ ಹೊರಡಿಸಿದ ಆದೇಶಗಳೇ ಕಾರಣವಾಗಿದೆ.

ಅದರೆ ತಮ್ಮ ತಪ್ಪನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಆದರೆ ಕಾಂಗ್ರೇಸ್ ಎಲ್ಲಾ ಅರೋಪಗಳಿಗೆ ಪ್ರತಿಭಟನೆಯಲ್ಲೇ ದಾಖಲೆ ಸಹಿತ ಉತ್ತರ ಕೊಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

LEAVE A REPLY

Please enter your comment!
Please enter your name here