ಕಾರ್ಕಳ:ರೋಟರಿ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಕಾರ್ಕಳ: ರೋಟರಿ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಜೂನ್ ೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ರೋಟರಿ ಕ್ಲಬ್ ಕಾರ್ಕಳ ಸಭಾಭವನದಲ್ಲಿ ನಡೆಸಲಾಯಿತು. .

ಯೋಗವು ಯಾವುದೇ ಧರ್ಮ ಜಾತಿಗೆ ಸೀಮಿತವಲ್ಲ. ಯೋಗವು ಗುರು ಶಿಷ್ಯರ ಬಾಂಧವ್ಯವನ್ನು ಬೆಸೆಯುತ್ತವೆ ಎಂದು ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಅಭಿಪ್ರಾಯ ಪಟ್ಟರು. ನಿಟ್ಟೆ ಕಾಲೇಜಿನ ವಿಶ್ರಾಂತಿ ಉಪನ್ಯಾಸಕರಾದ ಶ್ರೀನಿವಾಸ್ ಭಟ್ ರವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆಯಲ್ಲಿ ಹೃದಯಾಘಾತವನ್ನು ತಪ್ಪಿಸಲು ಯೋಗವು ರಾಮಬಾಣ. ಎಲ್ಲರೂ ಯೋಗದ ಪ್ರಯೋಜನವನ್ನು ಪಡೆಯಬೇಕು ಎಂದರು.

KMEM ಸಂಸ್ಥೆಯ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಮಾತನಾಡಿ ರೋಟರಿ ಕ್ಲಬ್ ಕಾರ್ಕಳದ ಸಭಾಂಗಣದಲ್ಲಿ ಇಪ್ಪತ್ತು ವರ್ಷಗಳಿಂದ ಯೋಗಾಭ್ಯಾಸ ನಡೆಯುತ್ತಿದೆ. ಯೋಗ ದಿನಾಚರಣೆಯ ಪ್ರಯೋಜಕ ಶ್ರೀನಿವಾಸ್ ಶೆಣೈ, ಉಪಹಾರ, ವಿದ್ಯಾರ್ಥಿಗಳಿಗೆ ಟಿ-ಶರ್ಟ್ ಗಳನ್ನೂ ವಿತರಿಸಿ, ಆಭರಣ ಜ್ಯುವೆಲರಿ ಕಾರ್ಕಳ ಇದರ ವತಿಯಿಂದ ಉತ್ತಮ ಕೆಲಸ ಮಾಡಿದ್ದಾರೆ. ಯೋಗ ಶಿಕ್ಷಕ ಮತ್ತು ಸಂಯೋಜಕರಾದ ಉದಯ್ ಕುಮಾರ್ ಕದಂಬ ಅವರ ನಿಸ್ವಾರ್ಥ ಸೇವೆ ಪ್ರಶಂಸನೀಯ. ಎಲ್ಲರೂ ಯೋಗಾಭ್ಯಾಸ ಮಾಡಿ ರೋಗದಿಂದ ದೂರವಿರೋಣ ಎಂದರು.

ಕಾರ್ಕಳ ಜೆಸಿಐ ಅಧ್ಯಕ್ಷ ಅರುಣ್ ಕುಮಾರ್ ಮಾಂಜ ಪ್ರಾಸ್ತಾವಿಕ ಮಾತನ್ನಾಡಿದರು. ಪುರಸಭೆ ಸದಸ್ಯೆ ಭಾರತೀ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದೂವರೆ ಗಂಟೆಗಳ ಕಾಲ ನಡೆದ ಯೋಗ ತರಬೇತಿಯಲ್ಲಿ 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟುಗಳು ಭಾಗವಹಿಸಿದ್ದರು.

   

LEAVE A REPLY

Please enter your comment!
Please enter your name here