ಕಾರ್ಕಳ : ಕಾರು-ಬಸ್ಸು ಡಿಕ್ಕಿ, ಪ್ರಯಾಣಿಕರು ಪಾರು

0

ಅತ್ತೂರಿನಿಂದ ನಿಟ್ಟೆಗೆ ಹೋಗುವ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ದೂಪದಕಟ್ಟೆ ಜಂಕ್ಷನ್ ನಲ್ಲಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರಿಗೆ ತೀವ್ರ‌‌ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಂಗಳೂರಿನಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗೆ ದೂಪದಕಟ್ಟೆ ಬಳಿ ಅತ್ತೂರು ಕಡೆಯಿಂದ ಪಡುಬಿದ್ರಿ ಕಡೆ ಸಂಚರಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ದೂಪದಕಟ್ಟೆ ಜಂಕ್ಷನ್ ನಲ್ಲಿ ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿಗೆ ತೀವ್ರತರ ಹಾನಿಯಾಗಿದೆ.

ಘಟನೆಯ ದೃಶ್ಯಾವಳಿ ಅಪಘಾತಗೊಂಡ ಕಾರಿನ ಹಿಂಭಾಗದಿಂದ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕಾರ್ಕಳ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

   

LEAVE A REPLY

Please enter your comment!
Please enter your name here