ಚೀನ : ವರ್ಷಗಳ ಹಿಂದೆ ನುಂಗಿದ್ದ ಬ್ರಷ್‌ ತೆಗೆದ ವೈದ್ಯರು!

0
ಸಾಂದರ್ಭಿಕ ಚಿತ್ರ

64 ವರ್ಷದ ವ್ಯಕ್ತಿಯೊಬ್ಬ ತಾನು 12 ವರ್ಷದವನಿದ್ದಾಗ ಅಂದರೆ 52 ವರ್ಷಗಳ ಹಿಂದೆ ಹಲ್ಲುಜ್ಜುವ ಬ್ರಷ್ ನುಂಗಿದ್ದು, ಇದೀಗ ಚೀನದ ವೈದ್ಯರು ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ಆಗಮಿಸಿದ್ದ ಯಾಂಗ್ ಅನ್ನು ಪರೀಕ್ಷೆಗೊಳಪಡಿಸಿದಾಗ ಸಣ್ಣಕರುಳಿ ನಲ್ಲಿ ಬ್ರಷ್ ಕಂಡುಬಂದಿದೆ. 12 ವರ್ಷದವನಾಗಿದ್ದಾಗ ಅಚಾನಕ್ಕಾಗಿ ಬ್ರಷ್ ನುಂಗಿದ್ದು, ಭಯದಿಂದಾಗಿ ಪೋಷಕರಿಗೆ ತಿಳಿಸಿರಲಿಲ್ಲ ಎಂದು ಯಾಂಗ್ ಹೇಳಿ ಕೊಂಡಿದ್ದಾರೆ. ಜತೆಗೆ ಬ್ರಷ್ ಕರುಳಿನೊಳಗೆ ವಕ್ರವಾಗಿ ಸಿಲುಕಿದ್ದ ಪರಿಣಾಮ ಯಾಂಗ್‌ಗೆ ದಶಕಗಳ ಕಾಲ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.

   

LEAVE A REPLY

Please enter your comment!
Please enter your name here