ಬೈಲೂರು : ದಲಿತ ಯುವಕನ ಮೇಲೆ ಬಿಜೆಪಿ ಬೆಂಬಲಿತರಿಂದ ಹಲ್ಲೆ: ಅಣ್ಣಪ್ಪ ನಕ್ರೆ ಆಕ್ರೋಶ

0

ಬೈಲೂರು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರ ಸಂಬಂಧಿಯಾಗಿರುವಾತನಿಂದ ಅಮಾಯಕ ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ತಾಲೂಕಿನ ಬೈಲೂರು ಕೌಡೂರು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರ ಸಂಬಂದಿಯಾಗಿರುವಾತ ಗುಂಪು ಕಟ್ಟಿಕೊಂಡು ಅಮಾಯಕ ದಲಿತ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ, ಈ ಘಟನೆಯಿಂದ ದಲಿತರು ಆತಂಕಗೊಂಡಿದ್ದಾರೆ.

ದಲಿತರನ್ನು ಜೀತದಾಳುಗಳಂತೆ ಕಾಣುವ ಮನುವಾದಿ ಬಿಜೆಪಿಯು ಅಧಿಕಾರದ ಬಲದಿಂದ ಇಂದು ಅಮಾಯಕ ದಲಿತರ ಮೇಲೆ ಹಲ್ಲೆ, ದೌರ್ಜನ್ಯವನ್ನು ನಡೆಸುತ್ತಿದೆ, ದಲಿತರನ್ನು ದ್ವೇಷಿಸುವ ಮನುವಾದಿಗಳ ಕೈಗೆ ಅಧಿಕಾರ ದೊರಕಿದ ಕಾರಣ ಇಂದು ದಲಿತರು ಭಯದ ವಾತಾವರಧಲ್ಲಿ ಬದುಕುವಂತಾಗಿದೆ. ಸಂವಿಧಾನವು ಜಾತಿ ಭೇದವಿಲ್ಲದೆ ಸರ್ವರಿಗೂ ಸಮಾನತೆಯನ್ನು ನೀಡಿದ್ದರೂ ದಲಿತರು ಇನ್ನೂ ಆತಂಕದಲ್ಲಿ ಬದುಕುವಂತಾಗಿರುವುದು ಖಂಡನೀಯ, ಪೋಲಿಸ್ ಇಲಾಖೆ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಣ್ಣಪ್ಪ ನಕ್ರೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   

LEAVE A REPLY

Please enter your comment!
Please enter your name here