ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಮುಟ್ಲುಪಾಡಿಯಲ್ಲಿ ಹಲವಾರು ದಿನಗಳಿಂದ ಒಂಟಿ ಸಲಗವೊಂದು ಅಲ್ಲಲ್ಲಿ ಗೋಚರಿಸಿದ ಸುದ್ದಿ ಕೇಳಿಬರುತ್ತಿದ್ದು,ಇದೀಗ ಶುಕ್ರವಾರ ಮುಂಜಾನೆ ಕೃಷಿಕ ನಾಗಯ್ಯ ನಾಯ್ಕ್ ರವರ ತೋಟದಲ್ಲಿ, ಕಂಗು, ಬಾಳೆ ಹಾಗೂ ತೋಟದ ತಡೆಗೋಡೆ ಯನ್ನು ಆನೆಯೇ ದ್ವಂಸ ಗೊಳಿಸಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ಗ್ರಾಮಸ್ಥರು ಆನೆಯ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಇಲಾಖೆಯವರು ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದಾರೆ.