ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಆಚರಿಸಿದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯೋತ್ಸವ, ಮರಾಠ ಪರಿಷತ್ ನ ಸುವರ್ಣ ಮಹೋತ್ಸವ, ವಿದ್ಯಾರ್ಥಿ ವೇತನ ಮತ್ತು ಸಹಾಯಧನ ವಿತರಣಾ ಸಮಾರಂಭವು ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯೋತ್ಸವವನ್ನು ಕಾರ್ಕಳ ಕ್ಷೇತ್ರದ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ರವರು ಶಿವಾಜಿ ವಿಗ್ರಹಕ್ಕೆ ಹಾಲು ಎರೆಯುವ ಮೂಲಕ ಉದ್ಘಾಟಿಸಿ ಶಿವಾಜಿ ಮಹಾರಾಜರ ತತ್ವ ಸಿದ್ದಾಂತಗಳನ್ನು ಈಗಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು, ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಸೀಮಿತವಾಗಿರದೆ ಹಿಂದೂ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದರು ಎಂದು ತಿಳಿಸಿದರು.
ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಕೆ.ಕೆ.ಎಂ.ಪಿ ರಾಜ್ಯ ಉಪಾಧ್ಯಕ್ಷರಾದ ಎಂ.ನಾಗೇಶ್ ರಾವ್ ವನ್ಸೆ ಪುಷ್ಪಾರ್ಚನೆಗೈದರು. ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಕವಡೆರವರು ಪ್ರಸ್ತಾವಿಕ ಮಾತುಗಳನ್ನು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಕೆ.ಎಂ.ಪಿ ರಾಜ್ಯ ಖಜಾಂಚಿ ಟಿ.ಆರ್. ವೆಂಕಟರಾವ್ ಚವಾಣ್ ವಹಿಸಿ ಪರಿಷತ್ ನ ಅಜೀವ ಸದಸ್ಯ, ಮರಾಠ ಪತ್ರಿಕೆಯ ಚಂದದಾರಗಬೇಕು ಮತ್ತು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಸಾಧನೆಗೈಯಬೇಕು, ಮರಾಠ ಪರಿಷತ್ ನಿಂದ ಹಾಗೂ ಮರಾಠ ನಿಗಮದಿಂದ ಸಿಗುವ ಸವಲತ್ತುಗಳನ್ನು ಪಡೆಯುವಲ್ಲಿ ಶ್ರಮಿಸಬೇಕು ಎಂದು ನುಡಿದರು. ಉಪಾಧ್ಯಕ್ಷ ಎಸ್.ಜಿ ರವಿ ಸಾವಂತ್ ಸಹಾಯಧನ ವಿತರಣೆ ಮಾಡಿದರು.
ಸಮಾಜದಲ್ಲಿ 10 ನೇ ತರಗತಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವಾರು ಸಮಾಜ ಬಂಧುಗಳಿಗೆ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾದ ಕೆ.ಕೆ.ಎಂ.ಪಿ ವ್ಯವಸ್ಥಾಪಕರಾದ ನಿವಾಸ ಮಗರ್ , ಬೋಳ ಸದಾಶಿವ ಶೆಟ್ಟಿ, ನವೀನ್ ಸುವರ್ಣ, ಕೆ.ಕೆ.ಎಂ.ಪಿ ಸಲಹೆಗಾರ ಕೇಶವ ರಾವ್ ಮಾನೆ, ಅನಂತ್ ರಾವ್ ಗಾಯಕ್ವಾಡ್, ಶ್ರೀನಿವಾಸ್ ರಾವ್ ಮದನೆ, ರಾಜ್ಯ ಮಹಿಳಾ ವೈಸ್ ಛೇರ್ಮನ್ ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ಗೋಪಾಲ್ ರಾವ್ ಪವರ್ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಬಂಧುಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವಗಳು ನಡೆಯಿತು. ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಕೀರ್ತನ್ ಕುಮಾರ್ ಲಾಡ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್ ಕವಡೆ ಕಾರ್ಯಕ್ರಮ ನಿರೂಪಿಸಿ, ಡಾ ಸುಮತಿ ಪವರ್ ಧನ್ಯವಾದವಿತ್ತರು.