ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವುಗಳ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರು ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ಪ್ರಾಥಮಿಕ ವಿಭಾಗದ ಕರಾಟೆ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‍ಕಿಂಗ್ ಆಂಗ್ಲಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು ಏಳು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಉಡುಪಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ ಒಂಬತ್ತನೇ ತರಗತಿಯ ಆಯುಶ್ರೀ ಎಂ. ಆಚಾರ್ಯ, ಸಾನ್ವಿ ಎಮ್. ನಾಯಕ್, ಎಂಟನೇ ತರಗತಿಯ ಸುದೀಕ್ಷಾ, ಅದ್ವಿತ್ ಡಿ ವಿ, ನಾಗೇಶ್ ಭಟ್ ಮತ್ತು ಪ್ರಾಥಮಿಕ ವಿಭಾಗದಿಂದ ಏಳನೇ ತರಗತಿಯ ಅಕ್ಷಯ್ ಪ್ರಭು, ಶಾರ್ವಿ ಬಾಲಕೃಷ್ಣ ಪೂಜಾರಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಒಂಬತ್ತನೇ ತರಗತಿಯ ಲಕ್ಷಣ್ಯ ಪಿ ಆರ್, ಶಗುನ್ ಎಸ್ ವರ್ಮಾ, ಹತ್ತನೇ ತರಗತಿಯ ಅಬ್ದುಲ್ ಅಝೀಝ್ ಸಫ್ವಾನ್ ಮತ್ತು ಡೇನಿಯಲ್ ಟಿ. ಕೆ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.