ಜೇಸಿಐ ಭಾರತದ ವಲಯ 15ರ ಪ್ರಾಂತ್ಯ ‘ಬಿ’ಯ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ ಹಾಗೂ ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿಯನ್ನುಜೇಸಿಐ ಕಾರ್ಕಳ ರೂರಲ್ ನ ಜೂನಿಯರ್ ಜೇಸಿ ವಿಭಾಗ ಪಡೆದುಕೊಂಡಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಜೇಸಿ ಸತೀಶ್ ಪೂಜಾರಿ ಕಲತ್ರಪಾದೆ ಇವರಿಂದ ಸ್ಥಾಪನೆಗೊಂಡು ಯಶಸ್ವಿಯಾಗಿ ಮುನ್ನಡೆದು ತನ್ನ ದಶಮಾನೋತ್ಸವ ಆಚರಿಸುತ್ತಿರುವ ಈ ಘಟಕವು ಜೂನಿಯರ್ ಜೇಸಿ ವಿಭಾಗದಿಂದ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಜು.13 ರಂದು ಕುಂದಾಪುರದಲ್ಲಿ ನಡೆದ ಜೂನಿಯರ್ & ಲೇಡಿ ಜೇಸಿ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿ ಅಭಿಲಾಷ್ ಬಿ.ಎ.ಇವರು ಜೂನಿಯರ್ ಜೇಸಿ ಅಧ್ಯಕ್ಷ ದಿಯಾ ರಾಜೇಶ್ ಭಂಡಾರಿ ಇವರಿಗೆ ಪ್ರಶಸ್ತಿ ಪ್ರದಾನ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಕಳ ರೂರಲ್ ಘಟಕದ ಅಧ್ಯಕ್ಷ ಜೇಸಿ ಅರುಣ್ ಪೂಜಾರಿ ಮಾಂಜ,ವಲಯ ಉಪಾಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್, ಜೂನಿಯರ್ ಜೆಸಿ ವಲಯ ನಿರ್ದೆಶಕ ಜೇಸಿ ದರ್ಷಿತ್ ಆರ್ ಶೆಟ್ಟಿ, ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ ವೀಣಾ ರಾಜೇಶ್ ಭಂಡಾರಿ, ಜೇಸಿ ಪ್ರಕಾಶ್ ಪೂಜಾರಿ ಕೆರ್ವಾಶೆ, ಜೇಸಿ ಸಂತೋಷ್ ಬಂಗೇರಾ, ಮತ್ತು ಸದಸ್ಯರುಗಳಾದ ಜೇಸಿ ಮಮತಾ ಸಂತೋಷ್, ಜೇಸಿ ಶ್ವೇತಾ ಅರುಣ್, ಜೇಸಿ ಹರಿಣಿ ಬಂಗೇರ, ಜೆಜೆಸಿ ರಕ್ಷಣ್, ಜೆಜೆಸಿ ರಿಯಾ, ಜೆಜೆಸಿ ಶರ್ವಾಣಿ ಜೆಜೆಸಿ ಅವಿಷ್ಕ ಮತ್ತಿತರರು ಉಪಸ್ಥಿತರಿದ್ದರು.