
ಕಾರ್ಕಳ ರೋಟರಿ ಆನ್ಸ್ ಕ್ಲಬ್ ಪದಗ್ರಹಣ
ಮಹಿಳೆಯರು ಸಮಾಜದಲ್ಲಿ ಆಗುವ ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವ ಗುಣವನ್ನು ಬೆಳೆಸಿಕೊಳ್ಳಬೇಕು, ಇನ್ನೊಬ್ಬರ ಸಂತೋಷವನ್ನು ಮೆಚ್ಚುವ ಗುಣಗ್ರಾಹಿಗಳಾಗಬೇಕು ಎಂದು ಕಾರ್ಕಳ ಆನ್ಸ್ ಕ್ಲಬ್ ನ ನೂತನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ಹಾಸ್ಯ ಮತ್ತು ಪ್ರೇರಕ ಭಾಷಣಗಾರರಾದ ಸಂಧ್ಯಾ ಶೆಣೈಯವರು ಹೇಳಿದರು.
ಸಮಾರಂಭದಲ್ಲಿ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರಿಗೆ ಪದ ಪ್ರಧಾನ ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷೆ ಜಯಂತಿ ಆನಂದ ನಾಯ್ಕ್ ರವರು ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ತನ್ನ ತಂಡದ ಪರಿಚಯ ಮಾಡಿದರು.
ಆನ್ಸ್ ನ ನಿಕಟ ಪೂರ್ವ ಚೇರ್ಮನ್ ಪ್ರಭಾ ನಿರಂಜನ್,ಅಧ್ಯಕ್ಷೆ ವಿನಯ ಅರುಣ್ ಶೆಟ್ಟಿ, ಕಾರ್ಯದರ್ಶಿ ರಕ್ಷಾ ಪ್ರಭಾತ್ ರನ್ನು ಗೌರವಿಸಿ ಸನ್ಮಾನಿಸಲಾಯಿತು.
ನೂತನ ಚೇರ್ಮನ್ ವೃಂದಾ ಹರಿಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಸುಮಾ ಸುರೇಶ್ ನಾಯಕ್, ಸವಿತಾ ಹೆಗ್ಡೆ,ಉಷಾ ಪ್ರಕಾಶ್ ಆಚಾರ್ಯ ಅತಿಥಿ ಗಣ್ಯರನ್ನು ಪರಿಚಯಿಸಿದರು. ಡಾ. ಉಷಾ ಕಿರಣ್ ಮತ್ತು ಟೆಲ್ಮಾ ಪ್ರಕಾಶ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.












