ಜಿಲ್ಲಾ ಕಾರ್ಯಕ್ರಮವಾದ ಹಸಿರೇ ಉಸಿರು ಕಾರ್ಯಕ್ರಮದ ಅಡಿಯಲ್ಲಿ ಜು.೨೩ ರಂದು ನಿಟ್ಟೆ ರೋಟರಿ ಕ್ಲಬ್ ಪ್ರಾಯೋಜಿತ ಅಂಗ ಸಂಸ್ಥೆ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ Dr. ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪರಿಸರದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ “ಪರಿಸರದ ಅಪಾಯ: ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣೆಯ ತುರ್ತು ಅಗತ್ಯತೆ ಮತ್ತು ಬದಲಾವಣೆಗೆ ಪ್ರೇರಕವಾಗಿ ವಿದ್ಯಾರ್ಥಿಗಳ ಪಾತ್ರ” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 43 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ವಿಜೇತರಿಗೆ ರೊ. ಡಾ. ರಘುನಂದನ್ ಪ್ರಶಸ್ತಿ ನೀಡಿ ಗೌರವಿಸಿದರು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇಂಟರಾಕ್ಟ್ ಕ್ಲಬ್ ನ ಮಕ್ಕಳಿಂದ ವಿವಿಧ ಬಗೆಗಳ ಹಣ್ಣು ಮತ್ತು ಗಿಡಮೂಲಿಕೆಯ ಸಸಿಗಳನ್ನು ನೆಡಲಾಯಿತು.
Dr. ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಪ್ರಭು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೊ. ವಿಷ್ಣುಮೂರ್ತಿ ಸರಳಾಯ, ವಲಯ ಸಂಯೋಜಕರು, ರೋಟರಿ ಜಿಲ್ಲೆ 3182 ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನಿಟ್ಟೆಯ ಸದಸ್ಯರು, ಇಂಟರಾಕ್ಟ್ ಕ್ಲಬ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.