ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗೈಗೊಂಡಿದ್ದ ಈದು ಗ್ರಾಮದ ಶ್ರವಣ್ ಪೂಜಾರಿ ಇವರಿಗೆ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯಿಂದ 1,10,032 ಧನ ಸಹಾಯ ಮಾಡಲಾಯಿತು.
ಕಾರ್ಕಳ ತಾಲೂಕಿನ ಈದು ಗ್ರಾಮದ ನಿವಾಸಿಗಳಾದ ಲತಾ ಹಾಗೂ ಸದಾನಂದ ಪೂಜಾರಿ ದಂಪತಿಯ ಏಕೈಕ ಪುತ್ರ ಶ್ರವಣ್ ಪೂಜಾರಿ ಇವರು, ಬಂಟ್ವಾಳದಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಬೆಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಚಿಕಿತ್ಸೆಗೆ ಸುಮಾರು 5 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಅತಿ ದುರ್ಬಲವಾಗಿದೆ. ಈ ವಿಷಯ ತಿಳಿದ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯು ಸುಮಾರು 1,10,032 ರೂಪಾಯಿಯನ್ನು ಊರಿನ ಪ್ರಮುಖರು ದಾನಿಗಳೊಂದಿಗೆ ಗಾಯಾಳುವಿನ ಕುಟುಂಬಕ್ಕೆ ಹಸ್ತಾಂತರಿಸಿತು.