ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಆಗಸ್ಟ್ ೨೫ರಂದು ಬುಧವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಜರಗಲಿರುವ 25ನೇ ವರ್ಷದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ವಾರ್ಷಿಕೋತ್ಸವ ಸಂಭ್ರಮ ಮತ್ತು 19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಅಬ್ಬನಡ್ಕ ಫ್ರಂಡ್ಸ್ ಕ್ಲಬ್‌ನ ಪೂರ್ವಾಧ್ಯಕ್ಷ ಆನಂದ ಪೂಜಾರಿ, ಸತೀಶ್ ಅಬ್ಬನಡ್ಕ, ಉದಯ ಅಂಚನ್, ಸದಸ್ಯರಾದ ಮಂಜುನಾಥ ಆಚಾರ್ಯ, ಹರೀಶ್ ಗೋಳಿಕಟ್ಟೆ, ಬಾಲಕೃಷ್ಣ ಮಡಿವಾಳ, ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಕೀರ್ತನ್ ಬೋಳ, ಪ್ರದೀಪ್ ಸುವರ್ಣ, ಲೀಲಾ ಪೂಜಾರಿ, ಲಲಿತಾ ಆಚಾರ್ಯ, ವೀಣಾ ಪೂಜಾರಿ, ಅನ್ನಪೂರ್ಣ ಕಾಮತ್, ಪದ್ಮಶ್ರೀ ಪೂಜಾರಿ, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ಹರಿಣಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.