Saturday, July 27, 2024

ಜ್ಞಾನಸುಧಾದ ಡಾ.ಪ್ರಜ್ವಲ್ ಕುಲಾಲ್‌ರ ಸಂಶೋಧನಾ ಲೇಖನ ಅಮೇರಿಕಾದ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟ ಭಾರತದ ಮೂವರಲ್ಲಿ ಇವರು ಓರ್ವರು

Homeಕಾರ್ಕಳಜ್ಞಾನಸುಧಾದ ಡಾ.ಪ್ರಜ್ವಲ್ ಕುಲಾಲ್‌ರ ಸಂಶೋಧನಾ ಲೇಖನ ಅಮೇರಿಕಾದ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟ ಭಾರತದ ಮೂವರಲ್ಲಿ...

ಜ್ಞಾನಸುಧಾದ ಡಾ.ಪ್ರಜ್ವಲ್ ಕುಲಾಲ್‌ರ ಸಂಶೋಧನಾ ಲೇಖನ
ಅಮೇರಿಕಾದ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟ
ಭಾರತದ ಮೂವರಲ್ಲಿ ಇವರು ಓರ್ವರು

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ರಸಾಯನ ಶಾಸ್ತçವಿಭಾಗದ ಮುಖ್ಯಸ್ಥರಾದ ಡಾ. ಪ್ರಜ್ವಲ್ ಕುಲಾಲ್‌ರವರ ಸಂಶೋಧನಾ ಲೇಖನವು ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟಗೊಂಡಿರುತ್ತದೆ. ನೀರಿನ ಶುದ್ಧೀಕರಣ ಕ್ಷೇತ್ರದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್‌ಗಳಾಗಿ ಪರಿಣಾಮಕಾರಿಯಾಗಿ ಬಳಸುವ ಸಂಶೋಧನೆಯನ್ನು ಗುರುತಿಸಿ 2022ರಲ್ಲಿ ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನವರು ತಮ್ಮ ವಿಜ್ಞಾನ ಸಂಭಂದಿ ಸಂಪಾದನಾ ಕೃತಿಯ ಒಂದು ಅಧ್ಯಾಯಕ್ಕೆ ಲೇಖನಾ ಪ್ರಬಂಧವನ್ನು ಇವರಿಂದ ಅಹ್ವಾನಿಸಿದ್ದರು.

ಇರಾನಿನ ಊರ್ಮಿಯಾ ವಿವಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ಮಹಮ್ಮದ್ ಸಿರೌಸಾಝರ್‌ರವರ ಪ್ರಧಾನ ಸಂಪಾದಕತ್ವದಲ್ಲಿ ರೂಪುಗೊಂಡ ಕೃತಿಯಾದ ‘ನ್ಯಾನೋ ಕಾಂಪೋಸಿಟ್ ಹೈಡ್ರೋಜೆಲ್ಸ್ ಆಂಡ್ ದೆಯರ್ ಎಮರ್ಜಿಂಗ್ ಅಪ್ಲಿಕೇಶನ್ಸ್’ ಇದರ 13ನೇ ಅಧ್ಯಾಯವಾಗಿ ಪ್ರಜ್ವಲ್‌ರವರ ಪ್ರಬಂಧವು ಪ್ರಕಟಗೊಂಡಿರುವುದು ಹೆಮ್ಮೆಯ ಸಂಗತಿ. ಈ ಅಧ್ಯಾಯದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್ ಹೈಡ್ರೋಜೆಲ್ ಗಳಾಗಿ ಪರಿವರ್ತಿಸಿ ನೀರನ್ನು ಕಲುಷಿತ ಗೊಳಿಸುವ ವಿಷಕಾರಿ ಪಾದರಸದ ಅಯಾನುಗಳನ್ನು ಬೇರ್ಪಡಿಸಿ ನೀರನ್ನು ಶುದ್ಧೀಕರಣಗೊಳಿಸುವ ಹಲವಾರು ಪ್ರಯೋಗಗಳನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಈ ಸಂಪಾದನಾ ಕೃತಿಯಲ್ಲಿ ವಿಶ್ವದ ವಿವಿಧ ದೇಶಗಳ ಪರಿಣತ ರಸಾಯನ ಶಾಸ್ತç ಸಂಶೋಧಕರಿAದ ಪ್ರಕಟಗೊಂಡ ಒಟ್ಟು 14 ಅಧ್ಯಾಯಗಳಲ್ಲಿ ಭಾರತದ ಮೂವರ ಅಧ್ಯಾಯವು ಸೇರ್ಪಡೆಗೊಂಡಿರುತ್ತದೆ. ಆ ಮೂವರಲ್ಲಿ ಡಾ. ಪ್ರಜ್ವಲ್‌ರವರು ಓರ್ವರಾಗಿದ್ದಾರೆ.

ಡಾ. ಪ್ರಜ್ವಲ್ ಕುಲಾಲ್ ಮಂಗಳೂರು ವಿವಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಡಾ. ವಿಶಾಲಾಕ್ಷಿ ಬಿ.ಯವರ ಮಾರ್ಗದರ್ಶನದಲ್ಲಿ ಈ ಸಂಶೋದನಾ ಲೇಖನವನ್ನು ಸಿದ್ದಪಡಿಸಿದ್ದರು. ಜೊತೆಗೆ ೨೦೨೦ರಲ್ಲಿ ಕೋಲ್ಕತ್ತಾದ ಇಂಡಿಯನ್ ಕೆಮಿಕಲ್ ಸೊಸೈಟಿಯವರು ಕೊಡಮಾಡಿದ ‘ಯುವ ವಿಜ್ಞಾನಿ’ ಪುರಸ್ಕಾರಕ್ಕೂ ಭಾಜನರಾಗಿದ್ದರು ಮತ್ತು 2022ರಲ್ಲಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕಾರ್ಕಳದ ಹಿರ್ಗಾನ ಗ್ರಾಮದ ಜಲಜ ಕುಲಾಲ್ ಮತ್ತು ಚಂದ್ರಶೇಖರ ದಂಪತಿಗಳ ಪುತ್ರರಾದ ಪ್ರಜ್ವಲ್ ಕುಲಾಲ್‌ರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ಹರ್ಷವ್ಯಕ್ತ ಪಡಿಸಿದ್ದು,ಜ್ಞಾನಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add