
ಅಖಿಲ ಭಾರತ ದೈವಾರಾಧಾಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ವತಿಯಿಂದ ಆ. 11 ರಂದು ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ವಿಧಾನಸಭಾಧ್ಯಕ್ಷ ಹಾಗೂ ಉಳ್ಳಾಲ ಕ್ಷೇತ್ರದ ಶಾಸಕರಾದ ಯು. ಟಿ. ಖಾದರ್ ಅವರನ್ನು ಒಕ್ಕೂಟದ ಸದಸ್ಯರು ಭೇಟಿಯಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆ ಕ್ಷೇತ್ರದಲ್ಲಿ ಚಾಕ್ರಿ ಮಾಡುವ ಸುಮಾರು 16 ವರ್ಗಗಳಿವೆ ಹಾಗೂ ಸುಮಾರು 20 ಸಾವಿರದ ಜನ ದೈವಚಕ್ರಿಯನ್ನು ಕುಲ ಕಸುಬಾಗಿ ಅವಲಂಬಿಸಿದ್ದಾರೆ.
ದೈವಚಾಕ್ರಿ ವರ್ಗವನ್ನು ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಗೆ ಸೇರ್ಪಡಿಸುವುದು, 60 ವರ್ಷ ಮೇಲ್ಪಟ್ಟು ದೈವ ಚಾಕ್ರಿ ವರ್ಗದವರಿಗೆ ಪಿಂಚಣಿ ಯೋಜನೆ ಹಾಗೂ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಸ್ಕಾಲರ್ ಶಿಪ್ ಹಾಗೂ ದೈವಾರಾಧನೆ ಅಕಾಡೆಮಿ ಸ್ಥಾಪನೆ ಮಾಡುವುದು, ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ಮಾತೃಭಾಷೆಯದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ರಾಷ್ಟ್ರೀಯ ಸ್ಥಾನಮಾನಗೆ ಸೇರ್ಪಡಿಸುವುದು, ಸರ್ಕಾರಿ ಸಮಾರಂಭಗಳಲ್ಲಿ ಹಾಗೂ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಾಟಕ ಯಕ್ಷಗಾನಗಳಲ್ಲಿ ದೈವಾರಾಧನೆ ಸಂಬಂಧ ಪಟ್ಟ ಮನೋರಂಜನೆ ಹಾಸ್ಯ ಇತರ ವಿಚಾರ ಬಗ್ಗೆ ಬಿಂಬಿಸುವ ಚಿತ್ರವನ್ನು, ದೃಶ್ಯ ಮೆರವಣಿಗೆಯಲ್ಲಿ ಟಾಬ್ಲೊ ನಿಷೇಧ ಮಾಡುವುದು ಹಾಗೂ ಇದಕ್ಕೆ ಸಂಬಂಧಪಟ್ಟ ಸೂಕ್ತ ಕಾಯ್ದೆ ಕಾನೂನು ತರುವುದು
ಇವೆಲ್ಲರ ಬಗ್ಗೆ ಮನವಿ ಕೊಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಕೇಂದ್ರೀಯ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಗೌರವ ಅಧ್ಯಕ್ಷರಾದ ಗಣೇಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ದಿನೇಶ ಪೂಜಾರಿ ಸಂಘಟನೆ ಕಾರ್ಯದರ್ಶಿ ರಮೇಶ್ ಪೂಜಾರಿ, ಉಪಾಧ್ಯಕ್ಷರಾದ ಉದಯ ಮೆಂಡನ್, ವಾಸು ಶೇರಿಗಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಮಿತ ಶೆಟ್ಟಿ, ಕೃಷ್ಣ ಪೂಜಾರಿ ಅಂಜಾರು, ಪ್ರಶಾಂತ್ ಶೆಟ್ಟಿ, ಸುನಿಲ್ ಮಂಚಿ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.



































