ವಿಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಪಂದ್ಯ, ಭಾರತದ ಬಾಲಕಿಯರ ತಂಡದ ಅರ್ಹತಾ ಶಿಬಿರಕ್ಕೆ ಅಯ್ಕೆಯಾದ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ

0

 

ಚೀನಾದ ಶಾಂಗ್ಲೋದಲ್ಲಿ ಡಿಸೆಂಬರ್ 4 ರಿಂದ 13 ವರೆಗೆ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ತಂಡದ ಆಯ್ಕೆಯ ಅರ್ಹತಾ ಶಿಬಿರಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಆಗಸ್ಟ್ ‌29 ರಿಂದ 30 ವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಆಯ್ಕೆ ಶಿಬಿರದಲ್ಲಿ ಎಲ್ಲಾ ರಾಜ್ಯಗಳಿಂದ ಆಯ್ದ 200ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದು, ರಾಷ್ಟ್ರೀಯ ಆಯ್ಕೆಗಾರರ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆದಿದೆ. ಅಂತಿಮವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ 23 ಆಟಗಾರರಲ್ಲಿ 2ನೇ ಸ್ಥಾನದಲ್ಲಿರುವ ಶಗುನ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ.

ಕುಮಾರಿ ಶಗುನ್ ಎಸ್. ವರ್ಮ ಹೆಗ್ಡೆ ಶ್ರೀಮತಿ ಶೃತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿಯಾಗಿದ್ದು, ಇವರು ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ ಸಿಲ್ವಾ, ಜೈರಾಜ್ ಪೂಜಾರಿ ಹಾಗೂ ಎಸ್. ಡಿ. ಎಮ್ ಉಜಿರೆಯ ರಮೇಶ್ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here