
ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇದರ ವತಿಯಿಂದ ಕಾರ್ಕಳದ ಕೆ.ಎಂ.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಉಡುಪಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ, ರಕ್ಷಾ, ರುಫಿಯಾ ಬಾನು, ಸಾಚಿ ಶೆಟ್ಟಿ, ಪ್ರಥಮ ವಿಜ್ಞಾನ ವಿಭಾಗದ ಪ್ರೀತಾ, ಅದಿತಿ ಆಚಾರ್ಯ, ಶ್ರಾವ್ಯ ಶೆಟ್ಟಿ, ದ್ವಿತೀಯ ವಾಣಿಜ್ಯ ನೇಹಾ ವಿ, ರವೀನಾ, ದ್ವಿತೀಯ ವಿಜ್ಞಾನ ವಿಭಾಗದ ಶ್ರುತ ತಂಡವನ್ನು ಪ್ರತಿನಿಧಿಸಿದ್ದರು. ವರುಣ ಶೆಟ್ಟಿ ಬೆಸ್ಟ್ ಅ್ಯಟಾಕರ್ ಪ್ರಶಸ್ತಿ ಪಡೆದರೆ ಶ್ರಾವ್ಯ ಶೆಟ್ಟಿ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.
ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್, ಲಾವಣ್ಯ ತಂಡವನ್ನು ತರಬೇತುಗೊಳಿಸಿದ್ದರು.












