ಸಾರ್ವಜನಿಕ‌ ಶ್ರೀ ಗಣೇಶೋತ್ಸವ ಸಮಿತಿಯಿಂದ ಕ್ರೀಡಾ ಪೋತ್ಸಾಹಕ ಸಹಾಯ ಧನ ವಿತರಣೆ

0

ಸಾರ್ವಜನಿಕ‌ ಶ್ರೀ ಗಣೇಶೋತ್ಸವ ಸಮಿತಿಯಿಂದ ಕ್ರೀಡಾ ಪೋತ್ಸಾಹಕ ಸಹಾಯ ಧನ ವಿತರಣೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ‌ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ ಲೆಕ್ಕಪತ್ರ ಮಂಡನೆ ಸಭೆಯು ಸ್ಥಾಪಕಾದ್ಯಕ್ಷ ಶುಭದರಾವ್ ಅಧ್ಯಕ್ಷತೆಯಲ್ಲಿ ಅದಿತ್ಯವಾರ ರಾಧಾಕೃಷ್ಣ ಸಭಾ ಭವನದಲ್ಲಿ ನಡೆಯಿತು.

ಕಳೆದ 18 ವರ್ಷಗಳಿಂದ ಗಣೇಶೋತ್ಸವ ಆಚರಣೆಯಿಂದ ಉಳಿಕೆ ಮೊತ್ತದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ, ಶೈಕ್ಷಣಿಕ, ಹಾಗೂ ಕ್ರೀಡಾ ಪ್ರೋತ್ಸಾಹಕ ಸಹಾಯ ಧನವನ್ನು ವಿತರಿಸುತ್ತಾ ಬರುತ್ತಿದ್ದು ಈ ವರ್ಷವೂ ರೂ 50,000 ಸಾವಿರ ಹಣವನ್ನು ಕ್ರೀಡಾ ಪ್ರೋತ್ಸಾಹಕ ಸಹಾಯ ಧನವಾಗಿ ವಿತರಣೆ ಮಾಡಲಾಗುತಿದೆ ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಈ ಸಹಾಯ ಧನವು ಉಪಯುಕ್ತವಾಗಲಿದೆ ಎಂದು ಶುಭದರಾವ್ ತಿಳಿಸಿದರು.

ಸಮಿತಿ ಸದಸ್ಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವೇದ ಮೂರ್ತಿ ಅತ್ತೂರು ವಾದಿರಾಜ ಆಚಾರ್ಯ ವಿತರಿಸಿದರು ವಿಶೇಷ ಸೇವಾ ಕಾರ್ಯ ಕೈಕೊಂಡ ನವೀನ್ ರಾವ್, ನಾಗೇಶ್ ಹೆಗ್ಡೆ, ಜ್ಯೋತಿ ಸತೀಶ್, ಆನಂದ್ ನಾಯಕ್, ಮಂಜುನಾಥ್ ಜೋಗಿ ಹಾಗೂ ದ್ರುವ ಕಾಮತ್ ಮೊದಲಾದವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ದೇವಾಡಿಗ, ಉಪಾದ್ಯಕ್ಷರಾದ ರಾಜರಾಮ್ ಕಾಮತ್, ಶಿವಾಜಿ ರಾವ್ ಉಪಸ್ಥಿತರಿದ್ದರು.

ಸದಸ್ಯರಾದ ಸುಖೇಶ್ ಕೋಟ್ಯಾನ್ ಸ್ವಾಗತಿಸಿ ಪ್ರಕಾಶ್ ಸಪಲಿಗ ಧನ್ಯವಾದವಿತ್ತರು ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ನಿರೂಪಿಸಿದರು‌.

   

LEAVE A REPLY

Please enter your comment!
Please enter your name here