
ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಸಾರ್ವಜನಿಕ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು, ನಿಟ್ಟೆ ಇಲ್ಲಿ ನಡೆಯಿತು.
ವಿವಿಧ ವಯೋಮಾನದವರಿಗೆ ನಾನಾ ರೀತಿಯ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಎರಡು ಸ್ತರಗಳಲ್ಲಿ ಮುದ್ದು ಕೃಷ್ಣ ಸ್ಪರ್ಧೆ ನಡೆದಿದ್ದು, ಸರ್ವರ ಮನಸೂರೆಗೊಂಡಿತು. ಮುಖ್ಯ ಅಭ್ಯಾಗತರಾಗಿ ಮಾತೃ ಸಂಸ್ಥೆ ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ಕೆ. ರಘುನಂದನ್ ರಾವ್, ರೋಟರಿ ಜಿಲ್ಲೆ – 3182ನ ಪಬ್ಲಿಕ್ ಇಮೇಜ್ ಜಿಲ್ಲಾ ಉಪಾಧ್ಯಕ್ಷರಾದ ರೊI ರೇಖಾ ಉಪಾಧ್ಯಾಯ, ಝೋನಲ್ ಲೆಫ್ಟಿನೆಂಟ್ ರೊI ಪ್ರಶಾಂತ್ ಬೆಳಿರಾಯ, RCCಯ ಪೂರ್ವ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿ ಹಾಗೂ RCC ಕ್ರೀಡಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು, ಸಂದರ್ಭೋಚಿತ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರೋಟರಿ ಸಮುದಾಯ ದಳದ ಸಭಾಪತಿ ರೊI ಡಾ. ದಿಲೀಪ್ ಕುಮಾರ್, ರೋಟರಿ ಸಮುದಾಯ ದಳದ ಕಾರ್ಯದರ್ಶಿ ಶ್ರೀಧರ ವಿ. ಆಚಾರ್ಯ ಮತ್ತು ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.) ಕೆಮ್ಮಣ್ಣು, ನಿಟ್ಟೆ ಇದರ ಕಾರ್ಯದರ್ಶಿ ಕೃಷ್ಣಾನಂದ ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ SSLC ಹಾಗೂ PUCಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯರಾದ ಕುಮಾರಿ ಪೃತ್ವಿ, ಕುಮಾರಿ ನಿರೀಕ್ಷಾ ದೇವಾಡಿಗ ಮತ್ತು ಸುಮಿತ್ ರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕೆಮ್ಮಣ್ಣು ಇಲ್ಲಿನ ಪರಿಚಾರಕರು ಹಿರಿಯರಾದ ನಾರಾಯಣ ದೇವಾಡಿಗ, ಕೃಷಿ ಕ್ಷೇತ್ರದ ಸಾಧಕ ಸುದಾಮ ಶೆಟ್ಟಿ, ದುಡ್ಡು ಮನೆ, ಬೋಳ ಹಾಗೂ ಹಿರಿಯ ನಾಗರಿಕರು ಹಾಗೂ ಕೃಷಿಕರಾದ ಶ್ರೀ ವಾಸು ಬಿ. ಕೋಟ್ಯಾನ್ ಇವರನ್ನು ಗೌರವಿಸಲಾಯಿತು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ಪ್ರಶಾಂತ್ ಕುಮಾರ್ ಸ್ವಾಗತಿಸಿದರು. ಹಿರಿಯರು ಮಾರ್ಗದರ್ಶಕರಾದ ರೊI ಕೆ. ಅನಿಲ್ ಕುಮಾರ್, ಶಂಕರ್ ಪೂಜಾರಿ ಹಾಗೂ ಉಮೇಶ್ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ವಿಠಲ್ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಗಣೇಶ್ ಭಟ್ ವಂದಿಸಿದರು. ಪೂರ್ವಾಧ್ಯಕ್ಷ ಸತೀಶ್ ಶೆಟ್ಟಿ, ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು.












