
ಕಾರ್ಕಳ ತಾಲೂಕಿನ ನೀರೆ ಬೈಲೂರು ಮೂಲದ ಮುಂಬೈಯಲ್ಲಿ ಉದ್ಯಮಿಯಾಗಿರುವ
ಶಿಶುಪಾಲ ಶೆಟ್ಟಿ ಮತ್ತು ಶ್ವೇತಾಶೆಟ್ಟಿಯವರ ಮಗನಾದ ಸನ್ವಿತ್ ಶೆಟ್ಟಿಯವರು
ಹೈದಬಾದಿನಲ್ಲಿ ನಡೆದ ಫಸ್ಟ್ ಏಷಿಯನ್ ಓಪನ್ ಅಂತರಾಷ್ಟ್ರೀಯ ಟೆಕ್ವ್ಯಾಂಡೋ
ಚಾಂಪಿಯನ್ ನಲ್ಲಿ ರನ್ನರ್ ಅಫ್ ವೈಯಕ್ತಿಕ ಚಾಂಪಿಯನ್ ಶಿಪ್ ಬೆಳ್ಳಿಯ
ಪದಕವನ್ನು ಪಡೆದು ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ತಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆ ಕುಕ್ಕುಂದೂರು ಕಾರ್ಕಳದಲ್ಲಿ
ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸನ್ವಿತ್ ಶೆಟ್ಟಿ ಈ ಸಾಧನೆಯನ್ನು
ಮಾಡಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಮತ್ತು
ಕಂಚಿನ ಪದಕವನ್ನು, ಶೃಂಗೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ
ಪದಕವನ್ನು, ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನದ
ಪದಕಗಳನ್ನು ಪಡೆದಿದ್ದಾರೆ.
ಟೆಕ್ವ್ಯಾಂಡೋ ಚಾಂಪಿಯನ್ ಸನ್ವಿತ್ ಶೆಟ್ಟಿಯವರಿಗೆ ಸಂಸ್ಥೆಯ ಅಧ್ಯಕ್ಷರಾದ
ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್,
ದೈಹಿಕ ಶಿಕ್ಷಕರಾದ ಸತೀಶ್ಚಂದ್ರ ಹೆಗ್ಡೆ, ಉಪನ್ಯಾಸಕರು, ಅಧ್ಯಾಪಕ ವೃಂದದವರು
ಶುಭಾಷಯಗಳನ್ನು ಕೋರಿದ್ದಾರೆ. ಕೋಚ್ ಸುರೇಶ್ ದೇವಾಡಿಗ ಅಭಿನಂದಿಸಿದ್ದಾರೆ.













