
ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.7 ರಂದು ಅಮೃತ ಮಹೋತ್ಸವದ ಪ್ರಯುಕ್ತ ನಡೆಸಲಾಗುವ ತಿಂಗಳ ಸರಣಿ ಕಾರ್ಯಕ್ರಮದ ಅಕ್ಟೋಬರ್ ತಿಂಗಳ ಕಾರ್ಯಕ್ರಮ ಭಜನಾ ಸ್ಪರ್ಧೆ ಮತ್ತು ಶಾರದಾ ಪೂಜೆ ನಡೆಯಿತು.
ಮಾಳದ ಹಿರಿಯ ಭಜಕ ಆನಂದ ನಾಯಕ್ ಇವರು ದೀಪ ಬೆಳಗಿಸುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ವಿಭಾಗದಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ಶ್ರೀರಂಗ ಜೋಶಿ, ಯೋಗೀಶ್ ಕಿಣಿ ಮತ್ತು ವಾರಿಜಾ ಕಾಮತ್ ಇವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾ ವಿಜೇತರಿಗೆ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ಸಭಾಧ್ಯಕ್ಷತೆಯನ್ನು ವಹಿಸಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿದರು. ನಿವೃತ್ತ ಶಿಕ್ಷಕರು ಹಾಗೂ ದಾನಿಗಳು ಆಗಿರುವಂತಹ ನಾಗಭೂಷಣ ಜೋಶಿ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿರುವ ವಿಮಲಾ ಪೂಜಾರಿ, ಶಾರದಾ ಪೂಜೆಯ ಪ್ರಾಯೋಜಕರಾಗಿರುವ ಸೋಮಯ್ಯ ಮೇರ, ಆನಂದ ನಾಯಕ್ ಮತ್ತು ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಹಾಗೂ ಸ್ಪರ್ಧಾ ತೀರ್ಪುಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ 60 ವರ್ಷಗಳಿಂದ ಶಾರದಾ ಪೂಜೆಯನ್ನು ಪ್ರಾಯೋಜಿಸುತ್ತಿರುವ ಸೋಮಯ್ಯ ಮೇರ, ಮಾಳದ ಭಜನೆ ಕಲಾವಿದ ಆನಂದ ನಾಯಕ್ ಇವರನ್ನು ಮತ್ತು ತೀರ್ಪುಗಾರರನ್ನು ಗೌರವಿಸಲಾಯಿತು.
ಅರ್ಚಕರಾದ ಅನಂತ ಪದ್ಮನಾಭ ಗೋರೆ ಇವರ ನೇತೃತ್ವದಲ್ಲಿ ಶಾರದಾ ಪೂಜೆಯು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಜನಾ ಸ್ಪರ್ಧೆಯ ತೀರ್ಪುಗಾರರು, ಭಜನಾ ಸ್ಪರ್ಧಿಗಳು, ಶಾಲಾ ಸಂಚಾಲಕರು, ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸರ್ವ ಸದಸ್ಯರು, ಊರಿನ ಹಿರಿಯರು,
ಪೋಷಕರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕ ವೃಂದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಶುಭಾ ಸ್ವಾಗತಿಸಿದರು. ಪ್ರಜ್ಞಾ ವಂದನಾರ್ಪಣೆಗೈದರು.












