Wednesday, February 21, 2024

ಕಾರ್ಕಳ:ಗೀತಾ ಸಂಭ್ರಮದ ಉದ್ಘಾಟನೆ

Homeಕಾರ್ಕಳಕಾರ್ಕಳ:ಗೀತಾ ಸಂಭ್ರಮದ ಉದ್ಘಾಟನೆ

ಕಾರ್ಕಳ:ಗೀತಾ ಸಂಭ್ರಮದ ಉದ್ಘಾಟನೆ

ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಹಾಗೂ ಸಾರ್ವಜನಿಕ ಗೀತಾ ಜಯಂತಿ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಜೋಡುರಸ್ತೆಯ ದೇವಿ ನಗರದ ಭಗವತಿ ಭಜನಾ ಮಂಡಳಿಯ ನೇತೃತ್ವದಲ್ಲಿ “ಶ್ರೀಮದ್ ಭಗವದ್ಗೀತಾ” ಶ್ಲೋಕಗಳ ಪಠಣ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಿತು.

ಉದ್ಘಾಟನೆಗೈದ ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಭಾಗವತರು ಆಗಿರುವ ಸೀತಾರಾಮ ಭಟ್ ರವರು ಗೀತೆಯ ಮಹತ್ವದೊಂದಿಗೆ ಶ್ರೀ ಕೃಷ್ಣ ತತ್ವದ ಮಹಿಮೆಯನ್ನು ವಿವರಿಸಿದರು.

ಆ ಬಳಿಕ ಗೀತಾ ಸಂಭ್ರಮದ ರೂವಾರಿ ಹಾಗೂ ಅಧ್ಯಾಪಕರು ಆಗಿರುವ ಶ್ರೀ ಸಂಜಯ್ ಮಾಸ್ಟರ್ ರವರ ಮಾರ್ಗದರ್ಶನದಲ್ಲಿ ಶ್ಲೋಕಗಳ ಪಠಣ ಸಾಮೂಹಿಕವಾಗಿ ನಡೆಯಿತು. ಭಗವತಿ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಶುಭಾ ವಾಗ್ಳೆ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರೊಂದಿಗೆ ಸ್ಥಳೀಯ ಹಿರಿಯರಾದ ಸರ್ವೋತ್ತಮ ಸಾಲ್ವನ್ಕರ್, ವೀರೇಂದ್ರ ವಿಪಿ,ರಮೇಶ್ ನಾಯಕ್, ಮುಂತಾದವರೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಿತಿಯ ಪ್ರಮೋದ್ ನಾಯಕ ಎಲ್ಲರನ್ನು ಸ್ವಾಗತಿಸಿದರೆ, ದಿನೇಶ್ ಶೆಟ್ಟಿ ಯವರು ನಿರೂಪಣೆ ಗೈದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular